ADVERTISEMENT

ವೆಬ್‌ಸೈಟ್‌ಗಳ ಮೇಲೆ ನಿಗಾ: ಗೂಗಲ್ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ವೆಬ್‌ಸೈಟ್‌ಗಳ ಮೇಲೆ ನಿರ್ಬಂಧ ಹೇರುವ ಅಥವಾ ಅವು ಪ್ರಕಟಿಸುವ ವಿಷಯಗಳ ಮೇಲೆ ನಿಗಾ ಇಡುವ ಬೇಡಿಕೆಗೆ ಅಮೆರಿಕ ಮೂಲದ ಗೂಗಲ್ ಮತ್ತು ಇತರ 21 ವೆಬ್‌ಸೈಟ್ ಸಂಸ್ಥೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಈ ಕುರಿತು ಆಡಳಿತಾತ್ಮಕ ಸಿವಿಲ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರ ಎದುರು ತಮ್ಮ ಆಕ್ಷೇಪವನ್ನು ದಾಖಲಿಸಿರುವ ಗೂಗಲ್ ಮತ್ತು ಇತರ ಸಂಸ್ಥೆಗಳು, ಇಂತಹ ಚಿಂತನೆಯು ಭಾರತದ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿಗೆ ವಿರುದ್ಧ ಎಂದು ವಾದಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.