ADVERTISEMENT

ವೈದ್ಯರ ನಿರ್ಲಕ್ಷ್ಯದ ಸಾವು ಅಪಘಾತ ವಿಮಾ ವ್ಯಾಪ್ತಿಗೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ನವದೆಹಲಿ (ಪಿಟಿಐ): ವೈದ್ಯರ ಅಜಾಗರೂಕತೆ ಅಥವಾ ನಿರ್ಲಕ್ಷ್ಯದಿಂದ ಸಂಭವಿಸುವ ಸಾವು ಕೂಡ ಅಪಘಾತವಾಗ್ದ್ದಿದು, ಸಾವನ್ನಪ್ಪಿದ ವ್ಯಕ್ತಿಯ ಕುಟುಂಬ ಅಪಘಾತ ವಿಮೆ ಪಡೆಯುವ ಎಲ್ಲಾ ಅರ್ಹತೆಯನ್ನು ಹೊಂದಿದೆ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ (ಎನ್‌ಸಿಡಿಆರ್‌ಸಿ) ತೀರ್ಪು ನೀಡಿದೆ.

ಹರಿಯಾಣದ ನರೇಂದ್ರ ಸಿಂಗ್ ಪತ್ನಿ ಶಸ್ತ್ರಚಿಕಿತ್ಸೆಯ ವೇಳೆ ಸಾವನ್ನಪ್ಪಿದ್ದರು. ಆದರೆ ಅದು ಅಪಘಾತ ದಿಂದ ಸಂಭವಿಸಿದ ಸಾವಲ್ಲ ಎಂದು ವಾದಿಸುವ ಮೂಲಕ ಭಾರತೀಯ ಜೀವವಿಮಾ ನಿಗಮವು ಸಿಂಗ್ ಅವರಿಗೆ ಅಪಘಾತ ವಿಮಾ ಮೊತ್ತ ನೀಡಲು ನಿರಾಕರಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಗ್ರಾಹಕ ವೇದಿಕೆ ಈ ತೀರ್ಪನ್ನು ನೀಡಿತಲ್ಲದೆ, ಸಿಂಗ್ ಅವರಿಗೆ ವಿಮಾ ಮೊತ್ತ ನೀಡುವಂತೆ ಜೀವವಿಮಾ ನಿಗಮಕ್ಕೆ ಆದೇಶ ನೀಡಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.