ಶಿಮ್ಲಾ (ಪಿಟಿಐ): ಚಂಬಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 43 ಜನರು ಸಾವಿಗೀಡಾಗಿದ್ದಾರೆ. ಒಂದು ಅಪಘಾತದಲ್ಲಿ ಮದುವೆಗೆ ಹೊರಟಿದ್ದ ತಂಡದ 34 ಜನ ಮೃತಪಟ್ಟಿದ್ದಾರೆ. ಈ ಅಪಘಾತಗಳಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.
ಕಳೆದ ರಾತ್ರಿ ಮದುವೆ ಸಮಾರಂಭಕ್ಕೆ 40 ಜನರನ್ನು ಕರೆದೊಯ್ಯುತ್ತಿದ್ದ ಲಾರಿಯೊಂದು ಚಂಬಾ ಜಿಲ್ಲೆ ಯ ಷೇರುಪುರ್ ಗ್ರಾಮದ ಬಳಿ ಉರುಳಿ ಈ ದುರ್ಘಟನೆ ನಡೆದಿದೆ ಎಂದು ಸಾರಿಗೆ ಸಚಿವ ಮೊಹಿಂದ್ರ ಸಿಂಘ್ ಗುರುವಾರ ವಿಧಾನ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ
ಘಟನಾ ಸ್ಥಳದಲ್ಲಿಯೇ 32 ಜನರ ಸಾವೀಗೀಡಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
9 ಮಂದಿ ಸಾವು: ಚಂಬಾದಿಂದ 65 ಕಿ.ಮೀ ದೂರದ ಭರ್ಮಾಪುರ ಬಳಿ ನಡೆದ ಮತ್ತೊಂದು ಅಪಘಾತದಲ್ಲಿ ಖಾಸಗಿ ಸಂಸ್ಥೆಗೆ ಸೇರಿದ್ದ 9 ಮಂದಿ ಉದ್ಯೋಗಿಗಳು ಮೃತರಾಗಿದ್ದಾರೆ.
ಖಾಸಗಿ ಸಂಸ್ಥೆಯ ಉದ್ಯೋಗಿಗಳನ್ನು ರಾತ್ರಿ ಕೆಲಸದ ನಂತರ ಅವರವರ ಮನೆಗಳಿಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಅವರನ್ನು ಸಾಗಿಸುತ್ತಿದ್ದ ವಾಹನ 300 ಮೀಟರ್ ಆಳದ ರಸ್ತೆಯ ಬದಿಯ ಕೊಳ್ಳದಲ್ಲಿ ಬಿದ್ದು ಈ ಅಪಘಾತ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.