ADVERTISEMENT

ಶಿರಡಿ ಸಾಯಿಬಾಬಾ ಹುಂಡಿಗೆ 1.8 ಕೋಟಿ ವಜ್ರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಶಿರಡಿ (ಪಿಟಿಐ): ಅಪರಿಚಿತ ವ್ಯಕ್ತಿಯೊಬ್ಬ ಕಾಣಿಕೆಯಾಗಿ ನೀಡಿದ ಸುಮಾರು ರೂ 1.8 ಕೋಟಿ ಮೌಲ್ಯದ ಎರಡು ವಜ್ರದ ಹರಳುಗಳು ಬುಧವಾರ ಸಾಯಿಬಾಬಾ ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಗಿವೆ.

ವಜ್ರದ ಹರಳುಗಳು ತಲಾ ಮೂರು ಮತ್ತು ಎರಡು ಕ್ಯಾರೆಟ್‌ನವು. ಇದೇ ಮೊದಲ ಬಾರಿಗೆ ಭಾರಿ ಬೆಲೆ ಬಾಳುವ ವಜ್ರಗಳು ಅಪರಿಚಿತ ವ್ಯಕ್ತಿಯಿಂದ ಕಾಣಿಕೆಯ ರೂಪದಲ್ಲಿ ಬಂದಿವೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.