ADVERTISEMENT

ಶೀಘ್ರವೇ ನೂತನ ವಿಜ್ಞಾನ ನೀತಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಭುವನೇಶ್ವರ (ಪಿಟಿಐ): `ವಿಜ್ಞಾನವನ್ನು ಜನತೆಯ ಒಳಿತಿಗಾಗಿ ಬಳಸಬೇಕು~ ಎಂದು ಬಲವಾಗಿ ಪ್ರತಿಪಾದಿಸಿದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ವಿಲಾಸ್‌ರಾವ್ ದೇಶ್‌ಮುಖ್, ಈ ಕ್ಷೇತ್ರವನ್ನು ನಿರ್ವಹಿಸಲು ಹಾಗೂ ಹೊಸತನವನ್ನು ಉತ್ತೇಜಿಸಲು ಶೀಘ್ರವೇ ನೂತನ ನೀತಿಯನ್ನು ಪ್ರಕಟಿಸಲಾಗುತ್ತದೆ ಎಂದು ಮಂಗಳವಾರ ತಿಳಿಸಿದರು.

`ನಮಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನೂತನ ನೀತಿಯ ಅಗತ್ಯವಿದೆ. ಇಂಥ ವಿವೇಚನಾಯುಕ್ತವಾದ ನೀತಿಯನ್ನು ನನ್ನ ಸಚಿವಾಲಯ ಶೀಘ್ರವೇ ರೂಪಿಸಲಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.