ADVERTISEMENT

ಶೆಹ್ಲಾ ಕುಟುಂಬಕ್ಕೂ ಬೆದರಿಕೆ ಬಂದಿತ್ತು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಭೋಪಾಲ್, (ಐಎಎನ್‌ಎಸ್): ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಅವರ ಹತ್ಯೆಯ ಬಳಿಕ ಅವರ ಕುಟುಂಬಕ್ಕೂ ಎರಡು ಬಾರಿ ಬೆದರಿಕೆ ಕರೆಗಳು ಬಂದಿದ್ದವು ಎಂದು ಫೋರಂ-ಏಷ್ಯಾ ಸಂಘಟನೆಯ ಸದಸ್ಯರು ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ಆದರೆ ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮಾನವ ಹಕ್ಕು ಸಂಘಟನೆಗಳ ಉದಾಸೀನ ಧೋರಣೆಗೆ ಸದಸ್ಯರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಫೋರಂ-ಏಷ್ಯಾ ಸಂಘಟನೆಯು ಹಲವು ಮಾನವ ಹಕ್ಕು ಸಂಘಟನೆಗಳ ಒಕ್ಕೂಟವಾಗಿದ್ದು ಮನಿಲಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.

`ಶೆಹ್ಲಾ ಹತ್ಯೆಯ ಬಳಿಕ ತಮಗೆ ಎರಡು ಬಾರಿ ಬೆದರಿಕೆ ಪತ್ರಗಳು ಬಂದಿದ್ದವು ಎಂದು ಮಸೂದ್ ತಂದೆ ಹಾಗೂ ಸಹೋದರಿ ತಿಳಿಸಿದ್ದಾರೆ. ಅವರು ಪತ್ರಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಶೆಹ್ಲಾ ಅವರ ಹತ್ಯೆ ಪೂರ್ವನಿಯೋಜಿತ ಕೊಲೆ ಎಂಬುದು ಸ್ಪಷ್ಟವಾಗುತ್ತದೆ~ ಎಂದು ಸಂಘಟನೆಯ ಸದಸ್ಯ ಆರ್ಯಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.