ADVERTISEMENT

ಸಂಗೀತ ನಿರ್ದೇಶಕ ರವಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಮುಂಬೈ(ಪಿಟಿಐ): ಹಿಂದಿ ಚಲನಚಿತ್ರ ಸಂಗೀತಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ರವಿ ಶಂಕರ್ ಶರ್ಮ (86) ದೀರ್ಘ ಕಾಲದ ಅಸ್ವಾಸ್ಥ್ಯದ ಬಳಿಕ ಇಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರವಿ ಎಂದೇ ಖ್ಯಾತರಾದ ಅವರು ಸುಮಾರು 70 ಹಿಂದಿ ಚಲನಚಿತ್ರ ಗೀತೆಗಳಿಗೆ ಮತ್ತು 14 ಮಲಯಾಳಂ ಚಲನಚಿತ್ರ ಗೀತೆಗಳಿಗೆ ಸಂಗೀತ ನಿರ್ದೇಶನ ನೀಡಿದ್ದರು.

`ಚೌಧವೀ ಕಾ ಚಾಂದ್ ಹೋ~, `ದಿಲ್ ಕೆ ಅರ್ಮಾನ್ ಆಂಸು ಬನ್‌ಕೆ ರಹ್‌ಗಯೇ~, `ಬಾರ್ ಬಾರ್ ದೇಖೋ, ಹಜಾರ್ ಬಾರ್ ದೇಖೋ ~, `ಮಿಲ್ತಿ ಹೈ ಜಿಂದಗಿ ಮೆ ಮೊಹಬ್ಬತ್ ಕಭಿ ಕಭಿ~ ಮುಂತಾದ ಮರೆಯಲಾಗದ ಹಾಡುಗಳಿಗೆ ಅವರು ಸಂಗೀತ ನೀಡಿದ್ದರು.

ರವಿ ಅವರು ಪುತ್ರ ಅಜಯ್, ಸೊಸೆ ಮರಾಠಿ ಹಾಗೂ ಹಿಂದಿ ಸಿನಿಮಾ ತಾರೆ ವರ್ಷಾ ಉಸ್ಗಾಂವ್‌ಕರ್ ಅವರನ್ನು ಅಗಲಿದ್ದಾರೆ. ರವಿ ಅವರ ಪತ್ನಿ ಕಾಂತಿ ಬಹಳ ವರ್ಷಗಳ ಹಿಂದೆಯೇ ನಿಧನರಾಗಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.