ಹೈದರಾಬಾದ್ (ಐಎಎನ್‌ಎಸ್): ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್‌ನ ನೂತನ ಅಧ್ಯಕ್ಷರ ಆಯ್ಕೆಯನ್ನು ಟ್ರಸ್ಟಿಗಳಲ್ಲಿನ ಭಿನ್ನಾಭಿಪ್ರಾಯದ ಕಾರಣ ಮುಂದಿನ ವಾರಕ್ಕೆ ಮುಂದೂಡಲಾಗಿದೆ.ಸತ್ಯ ಸಾಯಿ ಬಾಬಾ ಅವರು ಸ್ಥಾಪಿಸಿದ ಟ್ರಸ್ಟ್‌ನ ಉತ್ತರಾಧಿಕಾರಿ ಆಯ್ಕೆಗಾಗಿ ಪುಟ್ಟಪರ್ತಿಯಲ್ಲಿ ಭಾನುವಾರ ಟ್ರಸ್ಟ್ ಸದಸ್ಯರು ಸಭೆ ಸೇರಿದ್ದರು.
ಆದರೆ ಆಯ್ಕೆ ಬಗ್ಗೆ ಟ್ರಸ್ಟ್ ಸದಸ್ಯರು ಮತ್ತು ಆಡಳಿತ ಮಂಡಳಿ ಸದಸ್ಯರಲ್ಲಿ ಒಮ್ಮತ ಮೂಡಲಿಲ್ಲ. ಏ. 24ರಂದು ನಿಧನರಾದ ಸತ್ಯಸಾಯಿ ಬಾಬಾ ಅವರ ಗೌರವಾರ್ಥ 10ನೇ ದಿನ ಧಾರ್ಮಿಕ ವಿಧಿವಿಧಾನಗಳು ಮೇ 4ರಂದು ಮುಗಿದ ನಂತರ ಹೊಸ ಅಧ್ಯಕ್ಷರ ಆಯ್ಕೆಗೆ ಸಭೆ ಸೇರಲು ನಿರ್ಧರಿಸಲಾಯಿತು ಎಂದು ಟ್ರಸ್ಟ್‌ನ ಸಮೀಪವರ್ತಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.