ಚೆನ್ನೈ (ಪಿಟಿಐ): ಪರಸ್ಪರ ಸಹಮತದಿಂದ ಲೈಂಗಿಕ ಚಟುವಟಿಕೆ ನಡೆಸುವ ಪ್ರಾಪ್ತ ವಯಸ್ಕರನ್ನು ದಂಪತಿಯಾಗಿ ಪರಿಗಣಿಸಲಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
`ಕಾನೂನು ಒಪ್ಪಿದ ವಯಸ್ಸಿನ ಯಾವುದೇ ಜೋಡಿ ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಸಂಪರ್ಕ ಬೆಳೆಸಿದರೆ, ಅವರನ್ನು ಪತಿ ಮತ್ತು ಪತ್ನಿಯಾಗಿ ಮಾನ್ಯ ಮಾಡಲಾಗುತ್ತದೆ. ಮಂಗಳಸೂತ್ರ ಕಟ್ಟುವುದು, ಹಾರ ಬದಲಾಯಿಸಿಕೊಳ್ಳುವುದು, ಉಂಗುರ ತೊಡಿಸುವುದು ಇತ್ಯಾದಿ ವೈವಾಹಿಕ ವಿಧಿವಿಧಾನಗಳು ಸಮಾಜದ ತೃಪ್ತಿಗಾಗಿ ಮಾತ್ರ' ಎಂದು ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರ ಪೀಠ ಆದೇಶದಲ್ಲಿ ತಿಳಿಸಿದೆ.
`ಯಾವುದೇ ಕಡೆಯ ವ್ಯಕ್ತಿಯಾದರೂ ಲೈಂಗಿಕ ಸಂಬಂಧ ಹೊಂದಿದ ಬಗ್ಗೆ ಸೂಕ್ತ ದಾಖಲಾತಿಗಳೊಡನೆ ಕೌಟುಂಬಿಕ ನ್ಯಾಯಾಲಯದಲ್ಲಿ ವೈವಾಹಿಕ ಸ್ಥಾನಮಾನ ಘೋಷಣೆಗೆ ಅರ್ಜಿ ಸಲ್ಲಿಸಬಹುದು. ಇಂತಹ ಘೋಷಣಾಪತ್ರವನ್ನು ಪಡೆದ ದಂಪತಿ ಯಾವುದೇ ಸರ್ಕಾರಿ ದಾಖಲಾತಿಗಳಲ್ಲಿ ಹಾಜರುಪಡಿಸಬಹುದು' ಎಂದೂ ನ್ಯಾಯಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.