ADVERTISEMENT

ಸಾಕ್ಷ್ಯಾಧಾರಗಳೊಂದಿಗೆ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST
ಸಾಕ್ಷ್ಯಾಧಾರಗಳೊಂದಿಗೆ ಮೇಲ್ಮನವಿ
ಸಾಕ್ಷ್ಯಾಧಾರಗಳೊಂದಿಗೆ ಮೇಲ್ಮನವಿ   

ನವದೆಹಲಿ (ಪಿಟಿಐ): ಗೃಹಸಚಿವ ಪಿ. ಚಿದಂಬರಂ ವಿರುದ್ಧ ತಾವು ಸಲ್ಲಿಸಿದ್ದ ಅರ್ಜಿ ವಜಾ ಮಾಡಿರುವ ವಿಚಾರಣಾ ನ್ಯಾಯಾಲಯದ ಆದೇಶ ಅಚ್ಚರಿ ತಂದಿದೆ ಎಂದಿರುವ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ, ಇದು ಅತ್ಯಂತ ಗಂಭೀರವಾದ ಪ್ರಕರಣ; ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಹೋಗುವುದಾಗಿ ತಿಳಿಸಿದ್ದಾರೆ.

`ವಿಚಾರಣಾ ನ್ಯಾಯಾಲಯ ಅರ್ಜಿ ವಜಾ ಮಾಡಿದ ಮಾತ್ರಕ್ಕೆ ಚಿದಂಬರಂ ನಿರ್ದೋಷಿ ಎನ್ನಲಾಗದು. ಉನ್ನತ ನ್ಯಾಯಾಲಯಗಳಲ್ಲೂ ಅವರು ಆರೋಪ ಮುಕ್ತರಾಗಬೇಕು. ನಾನು ಸಲ್ಲಿಸಿದ ಅರ್ಜಿ ವಜಾ ಆಗುತ್ತಿರುವುದು ಇದೇ ಮೊದಲ ಸಲವೇನೂ ಅಲ್ಲ. ಇನ್ನಷ್ಟು ಸಾಕ್ಷ್ಯಾಧಾರಗಳೊಂದಿಗೆ ಮೇಲ್ಮನವಿ ಹೋಗುವೆ. ಅದಕ್ಕೂ ಮೊದಲು ಆದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡುವೆ~ ಎಂದಿದ್ದಾರೆ.

2ಜಿ ತರಂಗಾಂತರ ಹಂಚಿಕೆಯಲ್ಲಿ ಚಿದಂಬರಂ ಅವರ ಪಾತ್ರವೂ ಇದೆ. ಆದ್ದರಿಂದ ಈ ಪ್ರಕರಣದಲ್ಲಿ ಅವರನ್ನು ಸಹ ಆರೋಪಿ ಎಂದು ಪರಿಗಣಿಸಿ ವಿಚಾರಣೆಗೆ ಗುರಿ ಪಡಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.