ADVERTISEMENT

`ಸಾಕ್ಷ್ಯಾಧಾರವಿಲ್ಲದೆ ಹಫೀಜ್ ಬಂಧನ ಅಸಾಧ್ಯ'

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಮುಂಬೈ ಮೇಲಿನ ಅಮಾನುಷ ದಾಳಿ ಹಿಂದಿನ `ಮುಖ್ಯ ತಲೆ' ಹಫೀಜ್ ಸಯೀದ್ ಎಂಬ ಭಾರತದ ವಾದವನ್ನು ಒಪ್ಪದ ಪಾಕಿಸ್ತಾನ ಗೃಹ ಸಚಿವ ರೆಹಮಾನ್ ಮಲಿಕ್, ಆತನನ್ನು ಬಂಧಿಸಬಹುದಾದಂತಹ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಾಧಾರ ಈವರೆಗೆ ಲಭ್ಯವಾಗಿಲ್ಲ ಎಂದಿದ್ದಾರೆ.

`ಹಫೀಜ್ ಬಗ್ಗೆ ನಮಗೆ ಯಾವ ವಿಶೇಷ ಪ್ರೀತಿಯೂ ಇಲ್ಲ. ಆತನ ವಿರುದ್ಧ ಇವತ್ತು ಪುರಾವೆ ಸಿಕ್ಕಿದರೂ ಇಲ್ಲಿಂದ ಹೊರಡುವ ಮುನ್ನವೇ ಬಂಧನಕ್ಕೆ ಆದೇಶಿಸುತ್ತೇನೆ' ಎಂದು ಶುಕ್ರವಾರ ಸವಾಲು ಹಾಕಿದರು.

`ಹಫೀಜ್ ವಿಷಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರಿ ಅಪಪ್ರಚಾರ ಮಾಡುವ ಜತೆಗೆ ತೀವ್ರ ಒತ್ತಡ ಹೇರಲಾಗುತ್ತಿದೆ. ಆದರೆ ನಮಗೆ ಆತನ ಕುರಿತು ನಮಗೆ ನೀಡಿರುವ ಮಾಹಿತಿ ದಾಖಲೆಗಳಲ್ಲಿ ಯಾವ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಸಮರ್ಥಿಸಿಕೊಂಡರು.

ಕೇವಲ ಅಜ್ಮಲ್ ಕಸಾಬ್ ನೀಡಿದ್ದ ಹೇಳಿಕೆಯನ್ನು ಆಧರಿಸಿ ದಾಳಿಯಲ್ಲಿ ಸಯೀದ್ ಭಾಗಿಯಾಗಿದ್ದಾನೆಂಬ ನಿರ್ಧಾರಕ್ಕೆ ಬರಲಾಗದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.