ADVERTISEMENT

ಸಿಎಜಿ ವರದಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಕೃಷ್ಣಾ- ಗೋದಾವರಿ ಜಲಾನಯನ ಪ್ರದೇಶದಲ್ಲಿ ಹೈಡ್ರೊಕಾರ್ಬನ್ ಉತ್ಪಾದನಾ ಹಂಚಿಕೆ ಗುತ್ತಿಗೆ ಹಾಗೂ ಏರ್ ಇಂಡಿಯಾ ಪ್ರಗತಿ ಕುರಿತ ಮಹಾಲೇಖಪಾಲರ ವರದಿಗಳ ಪರಿಶೀಲನೆಗೆ ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಶುಕ್ರವಾರ ನಿರ್ಧರಿಸಿದೆ.

ಬಿಜೆಪಿ ಮುಖಂಡ ಮುರಳಿ ಮನೋಹರ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಈ ನಿರ್ಧಾರಕ್ಕೆ ಬಂದಿದೆ. ವರದಿಗಳ ಪರಿಶೀಲನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಇದೇ ತಿಂಗಳ 8ರಂದು ಸಂಸತ್‌ನಲ್ಲಿ ಈ ವರದಿಗಳು ಮಂಡನೆಯಾಗಿವೆ. ಹೈಡ್ರೊಕಾರ್ಬನ್ ಅನಿಲ ಹಂಚಿಕೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ನಷ್ಟ ಉಂಟು ಮಾಡುವ  ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ತೈಲ ಸಚಿವಾಲಯದ ಒಪ್ಪಂದವನ್ನು ಮಹಾಲೇಖಪಾಲರು ತೀವ್ರವಾಗಿ ಖಂಡಿಸಿದ್ದಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.