ADVERTISEMENT

ಸಿಖ್ ನಾಡಲ್ಲಿ 93 ಮಹಿಳಾ ಹುರಿಯಾಳು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಚಂಡೀಗಡ (ಪಿಟಿಐ): ಪಂಜಾಬ್ ವಿಧಾನಸಭಾ ಚುನಾವಣಾ ಕಣದಲ್ಲಿ ಈ ಬಾರಿ 93 ಮಹಿಳಾ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಾಂಗ್ರೆಸ್ ಅತಿ ಹೆಚ್ಚು ಮಹಿಳೆಯರನ್ನು ಕಣಕ್ಕೆ ಇಳಿಸಿದ್ದು, ಆ ನಂತರದ ಸ್ಥಾನದಲ್ಲಿ ಅಕಾಲಿದಳವಿದೆ. ಕಾಂಗ್ರೆಸ್ 11, ಅಕಾಲಿದಳ 10, ಬಿಜೆಪಿ ಮೂವರು, ಇತರ ಪಕ್ಷಗಳಿಂದ 24 ಮತ್ತು 45 ಮಹಿಳೆಯರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಒಟ್ಟು 117 ಕ್ಷೇತ್ರಗಳಲ್ಲಿ 1,080 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧು ಅವರ ಪತ್ನಿ ನವಜೋತ್ ಕೌರ್ ಅಮೃತಸರ (ಪೂರ್ವ ಕ್ಷೇತ್ರ)ದಿಂದ ಸ್ಪರ್ಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹರ್‌ಚರಣ್ ಸಿಂಗ್ ಬ್ರಾರ್ ಅವರ ಸೊಸೆ 60 ವರ್ಷದ ಕರಣ್ ಕೌರ್ ಮುಕ್ತಸರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.