ADVERTISEMENT

ಸಿಬಿಎಸ್‌ಇಯಿಂದ ನೈತಿಕ ಮೌಲ್ಯದ ಕಿಟ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2012, 19:30 IST
Last Updated 1 ನವೆಂಬರ್ 2012, 19:30 IST

ನವದೆಹಲಿ (ಪಿಟಿಐ): ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುವುದಕ್ಕಾಗಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ವಿಶೇಷ `ಶಿಕ್ಷಣ ಕಿಟ್~ ಪರಿಚಯಿಸಿದೆ.

`ಮೌಲ್ಯಗಳ ಶಿಕ್ಷಣ ಕಿಟ್~ ಎಂಬ ಹೆಸರಿನ ಈ ಕಿಟ್, ನೈತಿಕ ಶಿಕ್ಷಣದ ಕುರಿತು ಶಿಕ್ಷಕರಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಂಪನ್ಮೂಲ ಸಚಿವ ಎಂ.ಎಂ ಪಲ್ಲಂ ರಾಜು ಅವರ ಸಮ್ಮುಖದಲ್ಲಿ ಸಿಬಿಎಸ್‌ಇ ಈ ಕಿಟ್‌ನ್ನು ಗುರುವಾರ ಹೊರತಂದಿದೆ.

ಒಂದು  ಕೈಪಿಡಿ, ಶಾಂತಿ, ಏಕತೆ ಮತ್ತು ಪರಿಸರಕ್ಕೆ ಗೌರವ ನೀಡುವ ಮಹತ್ವಗಳನ್ನು ಸಾರುವ ಹಾಡುಗಳನ್ನೊಳಗೊಂಡ ಸಿಡಿ ಹಾಗೂ ಮೌಲ್ಯವನ್ನು ಬಿತ್ತುವ ಸಂದೇಶಗಳಿರುವ ಪತ್ರಗಳನ್ನು ಈ ಕಿಟ್ ಒಳಗೊಂಡಿದೆ.

ಕಿಟ್‌ನ್ನು ಬಿಡುಗಡೆ ಮಾಡಿ  ಮಾತನಾಡಿದ ಸಚಿವರು, `ಸಾರ್ವತ್ರಿಕ ಆದರ್ಶಗಳಾದ ಪ್ರೀತಿ, ಶಾಂತಿ, ಸಹನೆ, ಕ್ಷಮೆ, ನಮ್ರತೆ, ಅಹಿಂಸೆ ಮತ್ತು ತ್ಯಾಗಗಳು ಶಿಕ್ಷಣದ ತಳಹದಿಯಾಗಿದೆ~ ಎಂದು ಹೇಳಿದರು.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT