ನವದೆಹಲಿ (ಪಿಟಿಐ): `ಸಿಯಾಚಿನ್ ಕುರಿತಂತೆ ಹಠಾತ್ ನಿರ್ಧಾರ ಇಲ್ಲವೆ ಏಕಾಏಕಿ ನಾಟಕೀಯ ಘೋಷಣೆಗಳು~ ಹೊರಬೀಳುತ್ತವೆ ಎಂಬ ನಿರೀಕ್ಷೆ ಬೇಡ~ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ಸೇನೆಯ ಮೂರು ವಿಭಾಗಗಳ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಭಾರತ- ಪಾಕ್ ರಕ್ಷಣಾ ಇಲಾಖೆ ಕಾರ್ಯದರ್ಶಿಗಳ ಮಟ್ಟದ ಸಭೆಯು ಇದೇ 11- 12ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
`ಸಿಯಾಚಿನ್ ವಿಚಾರದಲ್ಲಿ ನಾವು ನಮ್ಮ ನಿಲುವಿಗೆ ಬದ್ಧರಾಗಿಯೇ ಇರುತ್ತವೆ. ಸಿಯಾಚಿನ್ ಅತ್ಯಂತ ಸೂಕ್ಷ್ಮ ಪ್ರದೇಶ, ದೇಶದ ಭದ್ರತೆಯ ದೃಷ್ಟಿಯಿಂದಲೂ ಅದು ಮಹತ್ವ ಪೂರ್ಣವಾದುದು. ಹಾಗಾಗಿ ನಾಟಕೀಯವಾದ ನಿರ್ಧಾರಗಳು ಹೊರಬೀಳುತ್ತವೆ ಎಂಬ ನಿರೀಕ್ಷೆ ಬೇಡ ~ ಎಂದು ತಿಳಿಸಿದ್ದಾರೆ.
`ಸಿಯಾಚಿನ್ ಪ್ರದೇಶದಲ್ಲಿ ಸೇನಾ ತುಕಡಿಗಳ ನಿಯೋಜನೆಯ ಸದ್ಯದ ಸ್ಥಿತಿಗತಿ ಬಗ್ಗೆ ಉಭಯ ದೇಶಗಳೂ ಖಚಿತವಾದ ದೃಢೀಕರಣ ನೀಡುವುದು ಅವಶ್ಯಕ~ ಎಂದೂ ನುಡಿದಿದ್ದಾರೆ.ಸಿಯಾಚಿನ್ ವಿಚಾರವನ್ನು ನಿರ್ವಹಿಸುತ್ತಿರುವ ಬಗ್ಗೆ ಸಂಪುಟದ ಭದ್ರತಾ ಉಪಸಮಿತಿ ಗುರುವಾರ ಸಭೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.