ADVERTISEMENT

ಸಿರಿಯಾ ವಿಶ್ವವಿದ್ಯಾಲಯ ಸ್ಫೋಟ; 87 ಬಲಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2013, 10:39 IST
Last Updated 16 ಜನವರಿ 2013, 10:39 IST
​ಅಲೆಪ್ಪೊ ವಿಶ್ವವಿದ್ಯಾಲಯದಲ್ಲಿ ಸ್ಫೋಟದಿಂದ ಹಾನಿಗೊಳಗಾದ ಕಟ್ಟಡದ ಬಳಿ ನೆರೆದಿರುವ ರಕ್ಷಣಾ ಸಿಬ್ಬಂದಿ ಹಾಗೂ ನಾಗರೀಕರು. ರಾಯಿಟರ್ಸ್‌ ಚಿತ್ರ.
​ಅಲೆಪ್ಪೊ ವಿಶ್ವವಿದ್ಯಾಲಯದಲ್ಲಿ ಸ್ಫೋಟದಿಂದ ಹಾನಿಗೊಳಗಾದ ಕಟ್ಟಡದ ಬಳಿ ನೆರೆದಿರುವ ರಕ್ಷಣಾ ಸಿಬ್ಬಂದಿ ಹಾಗೂ ನಾಗರೀಕರು. ರಾಯಿಟರ್ಸ್‌ ಚಿತ್ರ.   

ಬೈರತ್ (ಎಪಿ): ಸಿರಿಯಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆಸಿರುವ ಎರಡು ಬೃಹತ್ ಸ್ಫೋಟಗಳಲ್ಲಿ 87 ಜನರು ಮೃತಪಟ್ಟಿದ್ದಾರೆ ಎಂದು ಆಡಳಿತ ವಿರೋಧಿ ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ.

ಅಲೆಪ್ಪೊ ವಿಶ್ವವಿದ್ಯಾಲಯದಲ್ಲಿ ಸಾವಿನ ಸಂಖ್ಯೆಯು ಹೆಚ್ಚಳವಾಗುವ ಸಾಧ್ಯತೆಯಿದೆ. ಈಗಾಗಲೇ ವೈದ್ಯಕೀಯ ಪರಿಚಾರಕರು ಬಹಳಷ್ಟು ಗುರ್ತಿಸಲಾಗದ ಶವಗಳ ಅವಯವಗಳನ್ನು ಸಂಗ್ರಹಿಸಿದ್ದು, ಘಟನೆಯಲ್ಲಿ ಸುಮಾರು 150ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಸಿರಿಯಾದಲ್ಲಿರುವ ಬ್ರಿಟನ್ ಮೂಲದ  ಮಾನವ ಹಕ್ಕು ಆಯೋಗದ ವಿಕ್ಷಕರೊಬ್ಬರು ಬುಧವಾರ ತಿಳಿಸಿದರು.

ಆದರೆ ಇವರೆಗೆ ಯಾರು, ಯಾವ ಕಾರಣಕ್ಕೆ ಈ ದಾಳಿ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಅಧ್ಯಕ್ಷ ಬಷರ್ ಅಸದ್ ಬೆಂಬಲಿಗರು ನಡೆಸಿದ ವೈಮಾನಿಕ ದಾಳಿಯಿಂದ ಈ ಸ್ಫೋಟಗಳು ಸಂಭವಿಸಿವೆ ಎಂದು ಆಡಳಿತ ವಿರೋಧಿ ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು ಇದೊಂದು `ಉಗ್ರರ ಗುಂಪಿನ ಕೃತ್ಯ' ಎಂದು ಹೇಳಿದೆ.

ಸಿರಿಯಾದಲ್ಲಿ 2011ರ ಮಾರ್ಚ್‌ನಿಂದ ಪ್ರಾರಂಭವಾಗಿರುವ ರಾಜಕೀಯ ಬಿಕ್ಕಟಿಗೆ ಇವರೆಗೆ ಸುಮಾರು 60,000ಕ್ಕೂ ಅಧಿಕ ಜನರು ಪ್ರಾಣ ತೆತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.