ADVERTISEMENT

ಸುನಂದಾ ಪುಷ್ಕರ್‌ ದೇಹದಲ್ಲಿ ವಿಷ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2016, 10:28 IST
Last Updated 22 ಜನವರಿ 2016, 10:28 IST
ಸುನಂದಾ ಪುಷ್ಕರ್‌ ದೇಹದಲ್ಲಿ ವಿಷ ಪತ್ತೆ
ಸುನಂದಾ ಪುಷ್ಕರ್‌ ದೇಹದಲ್ಲಿ ವಿಷ ಪತ್ತೆ   

ನವದೆಹಲಿ (ಪಿಟಿಐ): ಸುನಂದಾ ಪುಷ್ಕರ್‌ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ  ಏಮ್ಸ್‌ ವೈದ್ಯರು  ನೀಡಿದ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದ್ದು ಅವರ ಮೃತ ದೇಹದಲ್ಲಿ ವಿಷ ಪತ್ತೆಯಾಗಿದೆ.

ದೆಹಲಿ ಪೊಲೀಸ್‌ ಆಯುಕ್ತರ ಕಚೇರಿ ಮೂಲಗಳು ವಿಷ ಪತ್ತೆಯಾಗಿರುವುದನ್ನು ಖಚಿತ ಪಡಿಸಿವೆ. 

ಏಮ್ಸ್‌ ವೈದ್ಯರು ನೀಡಿರುವ  ವರದಿಯನ್ನು ಪರಿಶೀಲಿಸಲಾಗಿದ್ದು ಅದನ್ನು  ಕೋರ್ಟ್‌ಗೆ ಸಲ್ಲಿಸುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.