ADVERTISEMENT

ಸೆರೆಮನೆಯಲ್ಲಿ ಮಗಳನ್ನು ಭೇಟಿಯಾದ ಕರುಣಾನಿಧಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ನವದೆಹಲಿ, (ಪಿಟಿಐ): ಡಿಎಂಕೆ ಮುಖ್ಯಸ್ಥರಾದ ಕರುಣಾನಿಧಿ ಅವರು 2 ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿ ತಿಹಾರ್ ಜೈಲಿನಲ್ಲಿರುವ ತಮ್ಮ ಪುತ್ರಿ  ಕನಿಮೊಳಿ ಅವರನ್ನು ಭೇಟಿ ಮಾಡಿದರು.

ಕರುಣಾನಿಧಿ ಅವರು ಪತ್ನಿ ರಜತಿ ಅಮ್ಮಾಳ್ ಮತ್ತು ಪುತ್ರ ಹಾಗೂ ಕೇಂದ್ರ ಸಚಿವ ಎಂ. ಕೆ. ಅಳಗಿರಿ ಅವರೊಂದಿಗೆ ಜೈಲಿನಲ್ಲಿ ಸುಮಾರು 45 ನಿಮಿಷಗಳ ಕಾಲ ಪುತ್ರಿಯೊಂದಿಗೆ ಕಳೆದ ಅವರು ಭಾವುಕರಾದರು.

ಸ್ವಲ್ಪ ಸಮಯದ ಬಳಿಕ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಕಲೈಂಞ್ಞರ್ ಟಿವಿ ಆಡಳಿತ ನಿರ್ದೇಶಕ ಶರತ್ ಕುಮಾರ್ ಅವರೂ ಕರುಣಾನಿಧಿಯವರೊಂದಿಗೆ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಮೇ 20 ರಂದು ಬಂಧನಕ್ಕೊಳಗಾದ ಬಳಿಕ ಕನಿಮೊಳಿಯವರೊಂದಿಗೆ ಕರುಣಾನಿಧಿ  ಅವರು ನಡೆಸುತ್ತಿರುವ ಎರಡನೇ ಭೇಟಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.