
ಪ್ರಜಾವಾಣಿ ವಾರ್ತೆನವದೆಹಲಿ (ಐಎಎನ್‌ಎಸ್): ಸೇನೆಯ ಮೇಜರ್ ಜನರಲ್ ರಾಜ್‌ಪಾಲ್ ಸಿಂಗ್ (55) ಶುಕ್ರವಾರ ಸಂಜೆ ಇಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಸ್ತುತ ಬಿಹಾರ ಮತ್ತು ಜಾರ್ಖಂಡ್‌ನ ಎನ್‌ಸಿಸಿ ಘಟಕದ ಹೆಚ್ಚುವರಿ ಮಹಾ ನಿರ್ದೇಶಕರಾಗಿರುವ ಸಿಂಗ್, ಪಶ್ಚಿಮ ದೆಹಲಿಯ ದ್ವಾರಕಾ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಅವರ ಪತ್ನಿ ಗುರುತಿಸಿದ್ದಾರೆ.
ತಮ್ಮನ್ನು ಪಟ್ನಾಕ್ಕೆ ವರ್ಗ ಮಾಡಿದ್ದರಿಂದ ಬೇಸತ್ತು ಈ ಕೃತ್ಯ ಮಾಡಿಕೊಂಡಿರುವುದಾಗಿ ಸಿಂಗ್ ಪತ್ರ ಬರೆದಿಟ್ಟಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.