ADVERTISEMENT

ಸೇನಾ ಮುಖ್ಯಸ್ಥರ ವಯಸ್ಸು: ಮನವಿಗೆ ಸುಪ್ರೀಂ ನಕಾರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 12:00 IST
Last Updated 20 ಜನವರಿ 2012, 12:00 IST
ಸೇನಾ ಮುಖ್ಯಸ್ಥರ ವಯಸ್ಸು: ಮನವಿಗೆ ಸುಪ್ರೀಂ ನಕಾರ
ಸೇನಾ ಮುಖ್ಯಸ್ಥರ ವಯಸ್ಸು: ಮನವಿಗೆ ಸುಪ್ರೀಂ ನಕಾರ   

ನವದೆಹಲಿ (ಐಎಎನ್ಎಸ್): ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮದಿನಾಂಕವನ್ನು 1951ರ ಮೇ 10 ಎಂಬುದಾಗಿ ಮರುನಮೂದಿಸುವಂತೆ ಕೋರಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿತು.

ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ಸುಪ್ರಿಂಕೋರ್ಟ್ ಪೀಠವು, ವ್ಯಕ್ತಿಯೊಬ್ಬರ ಜನ್ಮದಿನಾಂಕವನ್ನು ಸಂಘಟನೆಯೊಂದು ಎತ್ತಿಕೊಂಡು ಈ ರೀತಿ ರಿಟ್ ಅರ್ಜಿ ಸಲ್ಲಿಸುವಂತಿಲ್ಲವಾದ ಕಾರಣ ಗ್ರೆನೇಡಿಯರ್ಸ್ ಅಸೋಸಿಯೇಷನ್ (ಮಾಜಿ ಯೋಧರು) ಸಲ್ಲಿಸಿದ ರಿಟ್ ಅರ್ಜಿ ನಮ್ಮ ದೃಷ್ಟಿಯಲ್ಲಿ ವಿಚಾರಣಾಯೋಗ್ಯವಲ್ಲ~ ಎಂದು ಹೇಳಿತು.

ಜನರಲ್ ವಿ.ಕೆ. ಸಿಂಗ್ ಅವರ ಅರ್ಜಿ ಈಗಾಗಲೇ ನ್ಯಾಯಾಲಯದ ಮುಂದೆ ಬಾಕಿ ಇರುವುದರಿಂದ ಅರ್ಜಿಯ ಅರ್ಹತೆ ಬಗ್ಗೆ ಯಾವುದೇ ಅಭಿಪ್ರಾಯವನ್ನೂ ತಾನು ವ್ಯಕ್ತ ಪಡಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿತು.

 ತಮ್ಮ ಜನ್ಮ ದಿನಾಂಕವನ್ನು 1950ಕ್ಕೆ ಬದಲಾಗಿ 1951 ಮೇ 10 ಎಂಬುದಾಗಿ ಮರು ನಮೂದಿಸಿ ಅಧಿಕೃತ ದಾಖಲೆಗಳನ್ನು ಸರಿಪಡಿಸುವಂತೆ ಕೋರಿ ಜನರಲ್ ಸಿಂಗ್ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.