ADVERTISEMENT

ಸೋನಿಯಾ ಗುರುವಾರ ಭಾರತಕ್ಕೆ ಆಗಮನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 13:25 IST
Last Updated 7 ಸೆಪ್ಟೆಂಬರ್ 2011, 13:25 IST
ಸೋನಿಯಾ ಗುರುವಾರ ಭಾರತಕ್ಕೆ ಆಗಮನ
ಸೋನಿಯಾ ಗುರುವಾರ ಭಾರತಕ್ಕೆ ಆಗಮನ   

ನವದೆಹಲಿ (ಪಿಟಿಐ): ಗೊತ್ತಿಲ್ಲದ ಕಾಯಿಲೆಗೆ ಗೊತ್ತಿಲ್ಲದ ರಾಷ್ಟ್ರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ರಾತ್ರಿ ಸ್ವದೇಶಕ್ಕೆ ಹಿಂತಿರುಗುವ ಸಾಧ್ಯತೆಗಳಿವೆ.

ಒಂದು ತಿಂಗಳಿಗೂ ಹೆಚ್ಚಿನ ಕಾಲಾವಧಿಯ ಬಳಿಕ ಅವರು ಭಾರತಕ್ಕೆ ವಾಪಸಾಗುತ್ತಿದ್ದು, ಪುತ್ರಿ ಪ್ರಿಯಾಂಕಾ ಅವರ ಜೊತೆಗಿದ್ದಾರೆ ಎಂದು ನಂಬಲರ್ಹ ಮೂಲಗಳು ಹೇಳಿವೆ.

64ರ ಹರೆಯದ ಸೋನಿಯಾ ಗಾಂಧಿ ಅವರು ಆಗಸ್ಟ್ 2ರಂದು ರಾಷ್ಟ್ರದಿಂದ ಹೊರ ಹೋಗಿದ್ದು, ಆಗಸ್ಟ್ 4 ಮತ್ತು 5ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಸೋನಿಯಾ ಅವರು ರಾಷ್ಟ್ರದಿಂದ ಹೊರಹೋದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಸಂಕ್ಷಿಪ್ತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಸೋನಿಯಾ ಗಾಂಧಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು ಶಸ್ತ್ರಚಿಕಿತ್ಸೆಗೆ ಸಲಹೆ ಮಾಡಲಾಗಿದೆ ಎಂದು ಪ್ರಕಟಿಸಿತ್ತು.

ಅವರ ಅನುಪಸ್ಥತಿಯಲ್ಲಿ ರಾಹುಲ್ ಗಾಂಧಿ, ಹಿರಿಯ ನಾಯಕರಾದ ಎ.ಕೆ. ಆಂಟನಿ, ಅಹಮದ್ ಪಟೇಲ್ ಮತ್ತು ದ್ವಿವೇದಿ ಅವರನ್ನು ಒಳಗೊಂಡ ನಾಲ್ವರ ತಂಡಕ್ಕೆ ಪಕ್ಷದ ಉಸ್ತುವಾರಿ ನೋಡಿಕೊಳ್ಳಲು  ಹೇಳಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.