ADVERTISEMENT

ಸ್ವದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST

ಚೀನಾ ಜತೆ ಮಾತುಕತೆ
ನವದೆಹಲಿ (ಪಿಟಿಐ):
ಭಾರತ ಪ್ರವಾಸದಲ್ಲಿರುವ ಚೀನಾ ವಿದೇಶಾಂಗ ಸಚಿವ ಯಾಂಗ್ ಜೈಚಿ ಹಾಗೂ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ನಡುವೆ ಗುರುವಾರ ದೆಹಲಿಯಲ್ಲಿ ಮಾತುಕತೆ ನಡೆಯಿತು.

ಅರುಣಾಚಲ ಪ್ರದೇಶ, ಟಿಬೆಟ್ ಹಾಗೂ ಭಾರತೀಯ ವರ್ತಕರಿಗೆ ಚೀನಾದ ಅಧಿಕಾರಿಗಳಿಂದಾದ ಕಿರುಕುಳದ ವಿಚಾರಗಳು ಈ ಮಾತುಕತೆಯಲ್ಲಿ ಪ್ರಸ್ತಾಪವಾದವು.ಇಬ್ಬರು ವಿದೇಶಾಂಗ ಸಚಿವರ ಸಭೆ ನಡೆಯುತ್ತಿದ್ದಾಗ ಕಟ್ಟಡದ ಹೊರಗೆ ಟಿಬೆಟ್ ಹೋರಾಟಗಾರರು ಪ್ರತಿಭಟನೆ ನಡೆಸಿದರು.

ದೆಹಲಿ ವಿಫಲ ಸ್ಫೋಟ: ಇನ್ನೊಬ್ಬನ ಬಂಧನ
ನವದೆಹಲಿ/ರಾಂಚಿ (ಪಿಟಿಐ):
ವಿಫಲಗೊಂಡ ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆತೀವ್ರಗೊಳಿಸಿರುವ ಭದ್ರತಾಪಡೆಗಳು ತೌಸೀಫ್ ಅಹಮದ್ ಪೀರ್ (22) ಎಂಬಾತನನ್ನು ಜಾರ್ಖಂಡ್‌ನಲ್ಲಿ ಬಂಧಿಸಿದ್ದಾರೆ.

ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಸಂಖ್ಯೆ ಮೂರಕ್ಕೆ ಏರಿದೆ. ಪ್ರಕರಣದ ಪ್ರಮುಖ ಆರೋಪಿ ಅಥೇಶಮ್ ಮಲಿಕ್ ಸಂಬಂಧಿಯಾಗಿರುವ ತೌಸೀಫ್ ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ಎನ್ನಲಾಗಿದೆ.

ಲಾಲು ವಿರುದ್ಧ ಸಿಬಿಐ ಆರೋಪ ಪಟ್ಟಿ
ಪಟ್ನಾ (ಪಿಟಿಐ):
ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಶುಕ್ರವಾರ ಆರ್‌ಜೆಡಿ ಸಂಸದ ಲಾಲು ಪ್ರಸಾದ್  ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.`ಪ್ರಕರಣದಲ್ಲಿ ಸಿಬಿಐ ನನ್ನ ವಿರುದ್ಧ ತಪ್ಪಾಗಿ ಆರೋಪ ಹೊರಿಸಿದೆ~ ಎಂದು ಲಾಲು ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.