ADVERTISEMENT

ಹಕ್ಕುಚ್ಯುತಿ ನಿರ್ಣಯಕ್ಕೆ ಬೆಂಬಲ ಇಲ್ಲ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಅಣ್ಣಾ ಬಳಗದ ಕೆಲ ಸದಸ್ಯರ ವಿರುದ್ಧದ ಹಕ್ಕುಚ್ಯುತಿ ನಿರ್ಣಯವನ್ನುಅನುಮೋದಿಸುವುದಿಲ್ಲ ಎಂದು ಬಿಜೆಪಿ ಭಾನುವಾರ ಹೇಳಿದೆ. ಸಂಸದರು ವಿಶಾಲ ಹೃದಯಿಗಳಾಗಬೇಕು ಮತ್ತು ನಾಗರಿಕ ಸಮಿತಿ `ಕಟು~ ವಿಮರ್ಶೆಯಿಂದ ಪ್ರಚೋದನೆಗೆ ಒಳಗಾಗಬಾರದು ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

`ಸಂಸದರು ಖ್ಯಾತಿಯನ್ನು ಹಕ್ಕುಚ್ಯುತಿ ನಿರ್ಣಯದಿಂದ ಪಡೆದಿದ್ದಲ್ಲ. ಸಾರ್ವಜನಿಕ ಅಭಿಪ್ರಾಯದ ಶಕ್ತಿಯಿಂದ ಪಡೆದದ್ದು~ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.