
ಪ್ರಜಾವಾಣಿ ವಾರ್ತೆಶ್ರೀನಗರ (ಪಿಟಿಐ): ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಮಂಗಳವಾರ ಹಿಮಪಾತದಿಂದಾಗಿ ಗಡಿ ಭದ್ರತಾ ಪಡೆಯ ಒಬ್ಬ ಅಧಿಕಾರಿ ಮೃತಪಟ್ಟು, ಭದ್ರತಾ ಪಡೆಗೆ ಸೇರಿದ ಇತರ ಆರು ಮಂದಿ ನಾಪತ್ತೆಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಸಂಭವಿಸಿದ ಹಿಮಪಾತದಿಂದಾಗಿ ಗಡಿ ಭದ್ರತಾ ಪಡೆಯ ಸಬ್ ಇನ್ಸ್‌ಪೆಕ್ಟರ್ ನರೇಂದ್ರ ಕುಮಾರ್ ಮೃತಪಟ್ಟಿದ್ದು,ಆರು ಯೋಧರು ನಾಪತ್ತೆಯಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.