ADVERTISEMENT

ಹಿರಿಯ ನಟ ನವೀನ್ ನಿಶ್ಚಲ್ ನಿಧನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಮುಂಬೈ (ಪಿಟಿಐ): ಬಾಲಿವುಡ್‌ನ ಹಿರಿಯ ನಟ ನವೀನ್ ನಿಶ್ಚಲ್ (65) ಅವರು  ತೀವ್ರ ಹೃದಯಾಘಾತದಿಂದ ಶನಿವಾರ ನಿಧನರಾದರು. ನಟ, ನಿರ್ಮಾಪಕ ರಣಧೀರ್ ಕಪೂರ್ ಅವರ ಜತೆ ಪುಣೆಯಿಂದ ಬೆಳಿಗ್ಗೆ ಕಾರಿನಲ್ಲಿ ಬರುತ್ತಿದ್ದಾಗ ನವೀನ್ ಅವರಿಗೆ ಹೃದಯಾಘಾತವಾಯಿತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದರು.

ಕುಟುಂಬದ ಸದಸ್ಯರು, ಸ್ನೆಹಿತರು ಮತ್ತು ಬಾಲಿವುಡ್‌ನ ಗಣ್ಯರ ಉಪಸ್ಥಿತಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು. ಬುಡ್ಡಾ ಮಿಲ್ ಗಯಾ, ದ ಬರ್ನಿಂಗ್ ಟ್ರೈನ್, ಮೇಜರ್ ಸಾಬ್, ಖೋಸ್ಲಾ ಕಿ ಗೋಸ್ಲಾ ಮುಂತಾದ ಚಿತ್ರದಲ್ಲಿ ನಟಿಸಿದ್ದ ಅವರು ದೇಖ್ ಬಾಯಿ ದೇಖ್ ಧಾರಾವಾಹಿ ಮೂಲಕ ಕಿರುತೆರೆಯಲ್ಲೂ ಜನಪ್ರಿಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.