ನವದೆಹಲಿ (ಐಎಎನ್‌ಎಸ್): ಮೂರು ವರ್ಷದ ಹೆಣ್ಣು ಮಗುವೊಂದರ ಮೇಲೆ ಬೆಂಗಳೂರಿನಲ್ಲಿ ತಂದೆಯೇ ತೀವ್ರತರ ಹಲ್ಲೆ ನಡೆಸಿದ ಪ್ರಕರಣದ ಕುರಿತು ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗ (ಎನ್‌ಸಿಪಿಸಿಆರ್)ವು ಈ ಸಂಬಂಧ ಸರ್ಕಾರ ದೇಶದಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿಯ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.
`ಘಟನೆ ನಮಗಂತೂ ಆಘಾತ ತಂದಿದ್ದು ಈ ಬಗ್ಗೆ ಅಗತ್ಯ ತನಿಖೆ ಕೈಗೊಳ್ಳಲಾಗುವುದು. ತೀವ್ರ ಗಾಯಗಳಿಂದಾಗಿ ಬಾಲೆ ಆಫ್ರೀನ್ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ~ ಎಂದು ಆಯೋಗದ ಅಧ್ಯಕ್ಷೆ ಶಾಂತಾ ಸಿನ್ಹಾ ತಿಳಿಸಿದ್ದಾರೆ. `ಗಂಡು ಸಂತಾನ ಇಲ್ಲದ ಕಾರಣ ಆಕ್ರೋಶಗೊಂಡ ನನ್ನ ಪತಿಯು ಮಗುವನ್ನು ಕೊಲ್ಲಲು ಯತ್ನಿಸಿದ~ ಎಂದು ಆಫ್ರೀನ್ ತಾಯಿ ರೇಶ್ಮಾ ಹೇಳಿಕೆ ನೀಡಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.