ನವದೆಹಲಿ (ಪಿಟಿಐ): ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪರಣದ ರೂವಾರಿ ಎಂದು ಶಂಕಿಸಲಾದ ಅಬ್ದುಲ್ ರವೂಫ್‌ನನ್ನು ಚಿಲಿ ದೇಶದಲ್ಲಿ ನಾಲ್ಕು ತಾಸುಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ತಂಡವು, ಈ ಪ್ರಕರಣದಲ್ಲಿ ರವೂಫ್‌ನ ಪಾತ್ರ ಇರುವ ಬಗ್ಗೆ ಸ್ಪಷ್ಟ ನಿರ್ಧಾರ ತಳೆದಿಲ್ಲ. ಬದಲಿಗೆ ತಾವು ವಿಚಾರಣೆ ನಡೆಸಿದ ವ್ಯಕ್ತಿ ಅಸಲಿ ರವೂಫ್ ಹೌದೋ ಅಲ್ಲವೋ ಎಂಬ ಸಂಶಯವನ್ನು ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಉಗ್ರರ ಕೈವಾಡ ಇದೆಯೇ?; ಹಾಗಿದ್ದರೆ ರವೂಫ್ ಉಗ್ರರೊಂದಿಗೆ ನಂಟು ಹೊಂದಿದ್ದಾನೆಯೇ ಎಂಬ ವಿಚಾರಗಳ ಬಗ್ಗೆ ಆತನನ್ನು ಸಿಬಿಐನ ಇಬ್ಬರು ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಚಿಲಿಯಲ್ಲಿ ಅಧಿಕಾರಿಗಳು ಬಂಧಿಸಿರುವ ಈ ವ್ಯಕ್ತಿ ಅಬ್ದುಲ್ ರವೂಫ್ ಅಲ್ಲದೆ ಇರಬಹುದು ಎಂದು ಸಿಬಿಐ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.