ADVERTISEMENT

ಹೊಸ ಪಕ್ಷಕ್ಕೆ ದಿನಕರನ್ ಚಾಲನೆ

ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಅಸ್ತಿತ್ವಕ್ಕೆ

ಪಿಟಿಐ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ಮದುರೆಯಲ್ಲಿ ಗುರುವಾರ ಹೊಸ ಪಕ್ಷಕ್ಕೆ ಚಾಲನೆ ನೀಡಿದ ಟಿಟಿವಿ ದಿನಕರನ್ ಅವರು ಪಕ್ಷದ ಧ್ವಜ ಅನಾವರಣಗೊಳಿಸಿದರು –ಪಿಟಿಐ ಚಿತ್ರ
ಮದುರೆಯಲ್ಲಿ ಗುರುವಾರ ಹೊಸ ಪಕ್ಷಕ್ಕೆ ಚಾಲನೆ ನೀಡಿದ ಟಿಟಿವಿ ದಿನಕರನ್ ಅವರು ಪಕ್ಷದ ಧ್ವಜ ಅನಾವರಣಗೊಳಿಸಿದರು –ಪಿಟಿಐ ಚಿತ್ರ   

ಮದುರೆ : ಎಐಎಡಿಎಂಕೆ ಪಕ್ಷದ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರು ಗುರುವಾರ ಹೊಸ ಪಕ್ಷಕ್ಕೆ ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಹೆಸರಿನಲ್ಲಿ ‘ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ’ ಎಂಬ ಪಕ್ಷ ಸ್ಥಾಪಿಸಿರುವುದಾಗಿ ಘೋಷಿಸಿದರು.

ಈ ವೇಳೆ ಪಕ್ಷದ ಧ್ವಜವನ್ನು ಅನಾವರಣ ಮಾಡಿದರು. ಧ್ವಜದ ಮೇಲಿನ ಅರ್ಧಭಾಗ ಕಪ್ಪು ಹಾಗೂ ಕೆಳಗಿನ ಅರ್ಧಭಾಗ ಕೆಂಪು ಬಣ್ಣದಿಂದ ಕೂಡಿದೆ. ಮಧ್ಯದಲ್ಲಿ ಜಯಲಲಿತಾ ಅವರ ನಗುಮುಖ ಇದೆ. ಎಐಎಡಿಎಂಕೆಯಲ್ಲಿ ಅಸಮಾಧಾನಗೊಂಡಿರುವ ಸಾಕಷ್ಟ ಜನರು ತಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ದಿನಕರನ್‌ ಹೇಳಿದ್ದಾರೆ.

ಪಕ್ಷಕ್ಕೆ ನಿರ್ದಿಷ್ಟ ಹೆಸರಿಲ್ಲದ ಸಂದರ್ಭದಲ್ಲಿ ಕಾರ್ಯಕರ್ತರು ಕೆಲಸ ಮಾಡಲು ಪಟ್ಟ ಪಾಡನ್ನು ಅವರು ಈ ವೇಳೆ ನೆನಪಿಸಿಕೊಂಡರು.

ADVERTISEMENT

ಪ್ರೆಷರ್ ಕುಕ್ಕರ್ ಚಿಹ್ನೆಯನ್ನು ಪಕ್ಷಕ್ಕೆ ನೀಡುವಂತೆ ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್ ಸೂಚಿಸಿದೆ ಎಂದೂ ಅವರು ಹೇಳಿದ್ದಾರೆ. ಇದೇ ಚಿಹ್ನೆಯಡಿ ದಿನಕರನ್ ಅವರು ಆರ್‌.ಕೆ ನಗರ ಉಪಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದರು.

‘ಎಐಎಡಿಎಂಕೆ ಮತ್ತು ಅದರ ಎರಡೆಲೆ ಚಿಹ್ನೆ ನಮಗೆ ವಾಪಸ್ ಸಿಗುವವರೆಗೂ ಸಂಘಟನೆಗೆ ಮತ್ತೊಂದು ಹೆಸರು, ಚಿಹ್ನೆ ಹಾಗೂ ಧ್ವಜದ ಅಗತ್ಯವಿತ್ತು’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.