ADVERTISEMENT

ಹೊಸ ಮೈತ್ರಿಕೂಟ ರಚನೆಗೆ ಉಪ ತಂಡ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆಗೆ ಪೂರ್ವ ಭಾವಿಯಾಗಿ ಕಾಂಗ್ರೆಸ್ ಪಕ್ಷವು ಹೊಸ ಮೈತ್ರಿಕೂಟ ರಚಿಸಲು ನಿರ್ಧರಿಸಿದೆ. ಇದರಿಂದ ಮೈತ್ರಿ ಕಲೆಯಲ್ಲಿ ಪಳಗಿದ ಪಕ್ಷದ ಹಿರಿಯರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ.

ರಾಜಕೀಯ ಸವಾಲುಗಳಿಗೆ ಸಂಬಂಧಿಸಿ ಆಂಟನಿ ನೇತೃತ್ವದಲ್ಲಿ ಉಪ ತಂಡ ರಚಿಸಲಾಗಿದೆ. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಹಣಕಾಸು ಸಚಿವ ಪಿ.ಚಿದಂಬರಂ, ಮಾಹಿತಿ ಹಾಗೂ ಪ್ರಸಾರ ಸಚಿವ ಮನೀಶ್ ತಿವಾರಿ, ನಾಗಾಲ್ಯಾಂಡ್ ಮಾಜಿ ಮುಖ್ಯಮಂತ್ರಿ ಎಸ್.ಸಿ. ಜಮೀರ್, ಯುವ ದಲಿತ ಮುಖಂಡ ಅಶೋಕ್ ತನ್ವರ್ ಈ ಸಮಿತಿಯಲ್ಲಿ ಇದ್ದಾರೆ. ವಿವಿಧ ವಿಷಯಗಳಲ್ಲಿ ಕರಡು ಸಿದ್ಧಪಡಿಸಲು ರಚಿಸಿರುವ ಐದು ತಂಡಗಳಲ್ಲಿ ಇದೂ ಒಂದು.

ಜನವರಿ 18 ಹಾಗೂ 19ರಂದು ಜೈಪುರದಲ್ಲಿ ನಡೆಯಲಿರುವ ಚಿಂತನ ಶಿಬಿರದ ಮೇಲ್ವಿಚಾರಣೆಗಾಗಿ ಪಕ್ಷವು ಈ ಮೊದಲು ಹಿರಿಯ ನಾಯಕ ಮೋತಿಲಾಲ್ ವೋರಾ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.