ADVERTISEMENT

‘ಡಿಬಿಟಿಗೆ ಆಧಾರ್‌ ಕಡ್ಡಾಯವಲ್ಲ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 19:55 IST
Last Updated 14 ಜನವರಿ 2016, 19:55 IST

ಮುಂಬೈ(ಪಿಟಿಐ): ನೇರ ನಗದು ವರ್ಗಾವಣೆ ಯೋಜನೆಯ ಹಣ ಪಡೆಯಲು ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ  ನೀಡುವುದು ಕಡ್ಡಾಯವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಸ್ಪಷ್ಟಪಡಿಸಿದೆ.

ಬ್ಯಾಂಕ್ ಖಾತೆಗಳಿಗೆ ಆಧಾರ್‌ ಸಂಖ್ಯೆ ನೀಡುವುದು ಗ್ರಾಹಕರ ವೈಯಕ್ತಿಕ ಅಯ್ಕೆಗೆ ಬಿಟ್ಟಿದ್ದು ಹೊರತು ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್  ಆರ್‌ಬಿಐ ಮತ್ತು ಬ್ಯಾಂಕ್‌ಗಳಿಗೆ ಸ್ಪಷ್ಟನೆ ನೀಡಿದೆ. ನೇರ ನಗದು ವರ್ಗಾವಣೆಯ  ಖಾತೆಗಳಿಗೆ ಆಧಾರ್ ಸಂಖ್ಯೆ ಹೊಂದಿರಬೇಕು ಎಂದು ಆರ್‌ಬಿಐ 2013ರ ಜುಲೈನಲ್ಲಿ ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು.

ಉದ್ಯೋಗ ಖಾತ್ರಿ ಯೋಜನೆ, ಭವಿಷ್ಯನಿಧಿ, ಎಲ್ಲ ಪಿಂಚಣಿ ಯೋಜನೆ ಗಳು ಸೇರಿದಂತೆ ಸರ್ಕಾರದಿಂದ ಪಡೆಯುವ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳಿಗೆ ಆಧಾರ್ ಕಡ್ಡಾಯ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.