ADVERTISEMENT

‘ಬಿಜೆಪಿ, ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 20:11 IST
Last Updated 8 ಡಿಸೆಂಬರ್ 2013, 20:11 IST

ನವದೆಹಲಿ(ಪಿಟಿಐ): ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಆತಂಕ ತರುವ ವಿಷಯ ಎಂದು ಪಕ್ಷದ ಪ್ರಧಾನ ಕಾರ್ಯದಶಿರ್ ರಾಜೀವ್‌ ಪ್ರತಾಪ್‌ ರೂಡಿ ಹೇಳಿದ್ದಾರೆ.

‘ನಾವು ಕಾಲಕಾಲಕ್ಕೆ ಸರಿಯಾದ ನಿರ್ಣಯ ತೆಗೆದುಕೊಂಡಿದ್ದರೆ ಪಕ್ಷ ಇನ್ನೂ ಉತ್ತಮವಾಗಿ ಕಾರ್ಯನಿರ್ವ ಹಿಸುತ್ತಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ದೆಹಲಿಯಲ್ಲಿ ಸ್ಥಳೀಯ ಆಮ್‌ ಆದ್ಮಿ ಪಕ್ಷಕ್ಕೆ ಅವಕಾಶ ಸಿಕ್ಕಿದೆ. ಅದಕ್ಕೆ ಅನೇಕ ಕಾರಣಗಳಿರಬಹುದು. ಸರಿಯಾದ ಸಮಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯನ್ನು ಬಿಂಬಿಸುವಲ್ಲಿ ಪಕ್ಷ ವಿಫಲ ವಾಯಿತು. ಇದನ್ನೇ ಅನೇಕ ಮಾಧ್ಯಮ­ಗಳು ಬಿಂಬಿಸಿದವು. ಆದರೆ, ಈಗ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗಿದೆ. ಜನಪರ ಕಾಳಜಿಯಿಂದಾಗಿ ಆಮ್‌ ಆದ್ಮಿ ಪಕ್ಷ ಉದಯಿಸಿದೆ ಎಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಒಪ್ಪಿಕೊಳ್ಳಬೇಕು’ ಎಂದು ಹೇಳಿದ್ದಾರೆ.

‘ಸ್ಥಳೀಯ ಪ್ರಣಾಳಿಕೆಗಳು ರಾಷ್ಟ್ರೀಯ ಅಜೆಂಡಾವನ್ನು ನಿರ್ಮಿಸುತ್ತಿದೆ. ಅದೇ ದೆಹಲಿಯಲ್ಲಾಗಿದೆ. ಎಎಪಿಗೆ ಸಿಕ್ಕ ಮತಗಳು ಬಿಜೆಪಿಗೆ ಬರಬೇಕಾಗಿತ್ತು. ಒಂದುವೇಳೆ ಹಾಗಾಗಿದ್ದರೆ ಬಿಜೆಪಿಗೆ ಭಾರಿ ಗೆಲುವು ಸಿಗುತ್ತಿತ್ತು’ ಎಂದು ಹೇಳಿದ್ದಾರೆ.

‘ಆಮ್‌ ಆದ್ಮಿ ಪಕ್ಷ ದೆಹಲಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಅವರ ಪಕ್ಷ ಸ್ಪರ್ಧೆಗೆ ಇಳಿಯದಿದ್ದರೆ ಅದು ಇನ್ನೂ ಹೆಚ್ಚಿನ ಜನಬೆಂಬಲ ಇರುತ್ತಿತ್ತು. ದೆಹಲಿಯಲ್ಲಿ ಬಿಜೆಪಿ ಬಹುಮತ ಸಾಧಿಸಲಿದೆ ಎಂಬ ವಿಶ್ವಾಸ ಮೊದಲಿನಿಂದಲೇ ಇತ್ತು’ ಎಂದು ರಾಜ್ಯಸಭೆಯ ಬಿಜೆಪಿ ಉಪನಾಯಕ ರವಿಶಂಕರ್‌ ಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.