ADVERTISEMENT

ಜೆಟ್‌ಏರ್‌ವೇಯ್ಸ್‌: ‘ವಿಮಾನದಲ್ಲಿ ಉಗ್ರ’ ಎಂಬ ಫೋಟೊ ಕಳುಹಿಸಿದ್ದ ಪ್ರಯಾಣಿಕನ ಬಂಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 12:52 IST
Last Updated 26 ನವೆಂಬರ್ 2018, 12:52 IST
   

ಕೊಲ್ಕತ್ತಾ: ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಉಗ್ರ ಎಂಬ ಸ್ಟೇಟಸ್‌ನ ಫೋಟೊ ಕಳುಹಿಸಿದ್ದ ಜೆಟ್‌ ಏರ್‌ವೇಯ್ಸ್‌ನ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಯೋಗೆನ್ ಪೋಧರ್(21). ಈತ ಸಂದರ್ಶನದ ನಿಮಿತ್ತ ಮುಂಬೈಗೆ ತೆರಳುತ್ತಿದ್ದ ಎಂದು ತಿಳಿದು ಬಂದಿದೆ. ಈಗಾಗಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

ಜೆಟ್‌ ಏರ್‌ವೇಯ್ಸ್‌ 9ಡಬ್ಲ್ಯೂ472 ವಿಮಾನ ಮುಂಬೈಗೆ ಹೊರಟ್ಟಿತ್ತು. ಆಗ ಫೋಧರ್ ಸ್ನೇಹಿತನೊಟ್ಟಿಗೆ ಸ್ನ್ಯಾಪ್‌ ಚಾಟ್‌ನಲ್ಲಿ ಚಾಟ್ ಮಾಡುತ್ತಿದ್ದ ವೇಳೆ, ‘ವಿಮಾನದಲ್ಲಿ ಉಗ್ರನಿದ್ದಾನೆ. ನಾನು ವಿಮಾನದಲ್ಲಿರುವ ಮಹಿಳೆಯರ ಹೃದಯವನ್ನು ನಾಶಗೊಳಿಸುತ್ತೇನೆ’ ಎಂಬ ಅಡಿ ಬರಹದೊಡನೆ ಫೋಟೊ ಕಳುಹಿಸಿದ್ದ.

ADVERTISEMENT

ಇದನ್ನು ಗಮನಿಸಿದ್ದ ಮತ್ತೊಬ್ಬ ಪ್ರಯಾಣಿಕ ಬೆಂಜಮಿನ್ ಪ್ಲಾಕೆಟ್ ಎಂಬಾತಭದ್ರತಾ ಪಡೆಗೆ ತಿಳಿಸಿದ್ದಾನೆ.ಆಗ ಭದ್ರತಾ ಸಿಬ್ಬಂದಿ ಮತ್ತೊಬ್ಬ ಸಿಬ್ಬಂಇಗೆ ವಿಷಯ ಮುಟ್ಟಿಸಿದ್ದಾರೆ. ಆಗ ಜೆಟ್‌ಏರ್‌ ವೇಯ್ಸ್‌ನ ಭದ್ರತಾ ಸಿಬ್ಬಂದಿ ತಕ್ಷಣವೇ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.