ADVERTISEMENT

100ಕ್ಕೂ ಹೆಚ್ಚು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ನವದೆಹಲಿ (ಐಎಎನ್‌ಎಸ್): ಬಾಬಾ ರಾಮ್‌ದೇವ್ ಮತ್ತು ಅವರ ಬೆಂಬಲಿಗರ ಮೇಲೆ ಶನಿವಾರ ಮಧ್ಯರಾತ್ರಿ ಪೊಲೀಸರು ಬಲಪ್ರಯೋಗ ಮಾಡಿದ್ದರಿಂದ 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 

`ಸುಮಾರು 30 ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ~ ಎಂದು ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ (ಎಲ್‌ಎನ್‌ಜೆಪಿ) ವೈದ್ಯಾಧಿಕಾರಿ ತಿಳಿಸಿದ್ದಾರೆ.

ಬಾಬಾ ಅವರ ಬೆಂಬಲಿಗರು ಮತ್ತು ಪೋಲಿಸರ ಮಧ್ಯೆ ಘರ್ಷಣೆ ನಡೆಯಿತು. ಬಾಬಾ ಬೆಂಬಲಿಗರು ಸ್ಥಳದಲ್ಲಿ ಸಿಕ್ಕ ಕಬ್ಬಿಣದ ಸರಳು, ಅಗ್ನಿಶಾಮಕ ಸಾಧನ, ಕಲ್ಲುಗಳನ್ನು ಪೊಲೀಸರತ್ತ ಬೀಸಿ ಪ್ರತಿಭಟಿಸಿದರು. ಪೊಲೀಸರು ತಮ್ಮತ್ತ ಎಸೆದ ಕಲ್ಲನ್ನೇ ಪ್ರತಿಭಟನಾಕಾರರ ಮೇಲೆ ಬೀಸಿದ್ದಾರೆ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. 

ಬಾಬಾ ಅವರಿಗೆ ಯೋಗ ಶಿಬಿರ ಮಾಡಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಅವರು ಅಲ್ಲಿ ಸತ್ಯಾಗ್ರಹ ಆರಂಭಿಸಿದ್ದರಿಂದ ಅವರನ್ನು ಅಲ್ಲಿಂದ ತೆರವು ಮಾಡಬೇಕಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.