ADVERTISEMENT

ಮಣಿಪುರ: ನಿಷೇಧಿತ ಸಂಘಟನೆಗಳ 11 ಜನರ ಬಂಧನ

ಪಿಟಿಐ
Published 16 ಏಪ್ರಿಲ್ 2025, 16:15 IST
Last Updated 16 ಏಪ್ರಿಲ್ 2025, 16:15 IST
..
..   

ಇಂಫಾಲ್: ನಿಷೇಧಿತ ಸಂಘಟನೆಗಳ 11 ಸದಸ್ಯರನ್ನು ಮಣಿಪುರದ ಪ್ರಕ್ಷುಬ್ದ ಜಿಲ್ಲೆಗಳಾದ ತೌಬಲ್, ಟೆಂಗ್‌ನೌಪಾಲ್, ಇಂಫಾಲ್ ಪೂರ್ವ ಮತ್ತು ಪಶ್ಚಿಮದಲ್ಲಿ ಭದ್ರತಾ ಪಡೆಗಳು ಬಂಧಿಸಿವೆ.

ಕೆಸಿಪಿಗೆ (ಅಪುಂಬ ಸಿಟಿ ಮೈತೇಯಿ)ಗೆ ಸೇರಿದ ನಾಲ್ವರನ್ನು ತೌಬಲ್‌ನಲ್ಲಿ ಬಂಧಿಸಲಾಗಿದ್ದು, ಅವರಿಂದ ಪಿಸ್ತೂಲ್‌, ಜೀವಂತ ಮದ್ದುಗುಂಡುಗಳು ಮತ್ತು 3 ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಷಿಯಲಿಸ್ಟ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲಿಪಾಕ್ ಸಂಘಟನೆಯ ಮೂವರನ್ನು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮತ್ತು ಕೆಸಿಎಪಿಯ (ನೋಂಗ್‌ದ್ರೆಖೊಂಬಾ) ಸಕ್ರಿಯ ಸದಸ್ಯನೊಬ್ಬನನ್ನು ಇಂಫಾಲ್‌ ಪಶ್ಚಿಮ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ADVERTISEMENT

ಟೆಂಗ್‌ನೌಪಾಲ್ ಜಿಲ್ಲೆಯಲ್ಲಿ ಯುನೈಟೆಡ್‌ ನ್ಯಾಷನಲ್ ಲಿಬರೇಷನ್ ಫ್ರಂಟ್‌ನ (ಯುಎನ್‌ಎಲ್‌ಎಫ್–ಕೆ) ಮೂವರು ಸದಸ್ಯರನ್ನು ಸೆರೆಹಿಡಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.