ADVERTISEMENT

ರೋಹ್ಟಂಗ್‌ ಪ್ರಪಾತಕ್ಕೆ ಎಸ್‌ಯುವಿ ಕಾರು ಬಿದ್ದು 11 ಜನರ ದುರ್ಮರಣ

ಏಜೆನ್ಸೀಸ್
Published 23 ಆಗಸ್ಟ್ 2018, 11:22 IST
Last Updated 23 ಆಗಸ್ಟ್ 2018, 11:22 IST
ಎಎನ್‌ಐ ಚಿತ್ರ
ಎಎನ್‌ಐ ಚಿತ್ರ   

ಧರ್ಮಶಾಲಾ(ಹಿಮಾಚಲ ಪ್ರದೇಶ): ಇಲ್ಲಿನ ಮನಾಲಿ–ಲೇಹ್‌ ಹೆದ್ದಾರಿಯ ರೋಹ್ಟಂಗ್‌ ಪಾಸ್‌ನಲ್ಲಿ ಸಂಚರಿಸುತ್ತಿದ್ದ ಎಸ್‌ಯುವಿ ಕಾರೊಂದು ಪ್ರಪಾತಕ್ಕೆ ಬಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 5 ಮಕ್ಕಳು, 3 ಮಹಿಳೆಯರು ಸೇರಿದ್ದಾರೆ.

‘ಈ ದುರ್ಘಟನೆ ಬುಧವಾರ ರಾತ್ರಿ ಘಟಿಸಿದೆ. ವಾಹನದಲ್ಲಿ ಇರುವವರು ಮನಾಲಿಯಿಂದ ಪಂಗಿ ಎಂಬ ಊರಿಗೆ ತೆರಳುತಿದ್ದರು’ ಎಂದು ಪೋಲಿಸರು ತಿಳಿಸಿದ್ದಾರೆ.

‘ವಾಹನ ಪ್ರಪಾತಕ್ಕೆ ಬಿದ್ದಿರುವುದನ್ನು ದಾರಿಹೋಕರೊಬ್ಬರು ನಮ್ಮ ಗಮನಕ್ಕೆ ತಂದರು. ರಕ್ಷಣಾ ತಂಡ ಸ್ಥಳಕ್ಕೆ ತಲುಪಿದಾಗ, ಸವಾರರೆಲ್ಲರೂ ಮೃತಪಟ್ಟಿದ್ದರು. ಮೃತರ ಗುರುತನ್ನು ಪತ್ತೆ ಹಚ್ಚುತ್ತಿದ್ದೇವೆ. ಕಾರಿನ ನೋಂದಣಿ ಸಂಖ್ಯೆHP-45 7000 ಇದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರತಿಕೂಲ ಹವಾಮಾನ ಮತ್ತು ದಟ್ಟವಾದ ಮಂಜು ಕವಿದ ವಾತಾವರಣವೆ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ಪಷ್ಟ ಕಾರಣ ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.