ಮುಂಬೈ: ಅಹಮದಾಬಾದ್–ಲಂಡನ್ ವಿಮಾನವು ಪತನವಾಗುವ ಕೆಲವೇ ತಾಸುಗಳ ಮೊದಲು ಅದೇ ವಿಮಾನದಲ್ಲಿ ದೆಹಲಿಯಿಂದ ಪ್ರಯಾಣಿಸಿದ್ದಾಗಿ ಆಕಾಶ್ ವತ್ಸ ಎಂಬ ಉದ್ಯಮಿ ಹೇಳಿದ್ದು, ಕೆಲವು ಸಮಸ್ಯೆಗಳನ್ನು ಸಿಬ್ಬಂದಿಯ ಗಮನಕ್ಕೆ ತಂದಿದ್ದಾಗಿಯೂ ತಿಳಿಸಿದ್ದಾರೆ.
‘ಅಹಮದಾಬಾದ್‌ನಿಂದ ವಿಮಾನ ಟೇಕಾಫ್ ಆಗುವ ಎರಡು ತಾಸು ಮೊದಲು ಅದೇ ವಿಮಾನದಲ್ಲಿ ನಾನು ದೆಹಲಿಯಿಂದ ಅಲ್ಲಿಗೆ ಪ್ರಯಾಣಿಸಿದ್ದೆ. ಓದಲು ಇಟ್ಟಿದ್ದ ನಿಯತಕಾಲಿಕೆಗಳನ್ನು ಜನರು ಗಾಳಿ ಬೀಸಿಕೊಳ್ಳಲು ಬಳಸುವಷ್ಟು ಧಗೆ ಇತ್ತು. ಹವಾನಿಯಂತ್ರಣ ವ್ಯವಸ್ಥೆ ಕೈಕೊಟ್ಟಿತ್ತು’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಮಾನದ ಮೂರು ವಿಡಿಯೊಗಳು ಹಾಗೂ ಒಂದು ಫೋಟೊವನ್ನೂ ಅವರು ‘ಅಟ್ಯಾಚ್’ ಮಾಡಿದ್ದು, ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.
ಅಪಘಾತಕ್ಕೂ ಆಕಾಶ್ ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಸಮಸ್ಯೆಗೂ ಸಂಬಂಧ ಇದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಪರಿಣತರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.