ADVERTISEMENT

ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ 12 ಕೆ.ಜಿ ಚಿನ್ನ ವಶ

ಪಿಟಿಐ
Published 22 ನವೆಂಬರ್ 2022, 16:15 IST
Last Updated 22 ನವೆಂಬರ್ 2022, 16:15 IST
   

ಕೊಯಮತ್ತೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18 ಪ್ರಯಾಣಿಕರಿಂದ ₹6.5 ಕೋಟಿ ಮೌಲ್ಯದ 12 ಕೆ.ಜಿ ಚಿನ್ನವನ್ನು ಆದಾಯ ಗುಪ್ತಚರ ಆಧಿಕಾರಿಗಳು ವಶಪಡಿಸಿಕೊಂಡಿದ್ಧಾರೆ.

ಈ ಪ್ರಯಾಣಿಕರೆಲ್ಲ ಶಾರ್ಜಾದಿಂದ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ದಿಷ್ಟ ಮಾಹಿತಿ ಆಧರಿಸಿ ತಪಾಸಣೆ ನಡೆಸಿದ ಅಧಿಕಾರಿಗಳು ಏರ್ ಅರೇಬಿಯಾ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರ ಪ್ಯಾಂಟ್ ಜೇಬು, ಒಳ ಉಡುಪು, ಬ್ಯಾಗ್ ಮುಂತಾದೆಡೆ ಇಟ್ಟುಕೊಂಡಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ವಿದೇಶದಿಂದ ತಂದಿದ್ದ ಸುಮಾರು 12 ಕೆ.ಜಿ ಚಿನ್ನದ ಮೌಲ್ಯ ಸುಮಾರು ₹6.5 ಕೋಟಿ ಎಂದು ಅಂದಾಜಿಸಲಾಗಿದೆ.

ಚೆನ್ನೈ ಮೂಲದ ಸುರೇಶ್ ಕುಮಾರ್, ಕಡಲೂರಿನ ಶಂಕರ್, ಪರಮ್‌ಕುಡಿಯ ರಾಮಪ್ರಭು ಮತ್ತು ಸೇಲಂನ ಕುಮಾರ ವೇಲು ಎಂಬ ನಾಲ್ವರು ಪ್ರಯಾಣಿಕರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.