ADVERTISEMENT

13 ವರ್ಷದ ಬಾಲಕನಿಗೆ ಥಳಿಸಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ರಾಂಚಿ (ಐಎಎನ್‌ಎಸ್): ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಜವಾನನೊಬ್ಬ 13 ವರ್ಷದ ಹುಡುಗನನ್ನು ಮನಬಂದಂತೆ ಥಳಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಧನಬಾದ್‌ನಲ್ಲಿ ಶುಕ್ರವಾರ ನಡೆದಿದೆ.

ಝಾರಿಯಾ ಕಲ್ಲಿದ್ದಲು ಪ್ರದೇಶದಲ್ಲಿರುವ ಬಿಸಿಸಿಎಲ್ ಕಂಪೆನಿಯ ಘಾನಾವಾಡಿ ಸಮೀಪ ಮೃತ ಬಾಲಕನ ಶವ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

`ಕಲ್ಲಿದ್ದಲ್ಲು ಕಳವು ಮಾಡಿದ್ದ ಹಿನ್ನೆಲೆಯಲ್ಲಿ ಬಾಲಕನನ್ನು ಹಿಡಿದು ಸಿಐಎಸ್‌ಎಫ್ ಸಿಬ್ಬಂದಿ ತೀವ್ರವಾಗಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿರುವುದಾಗಿ~ ಗ್ರಾಮಸ್ಥರು ಆರೋಪಿಸಿದ್ದಾರೆ, ಆದರೆ, ಸಿಐಎಸ್‌ಎಫ್ ಆರೋಪವನ್ನು ನಿರಾಕರಿಸಿದೆ.

`ಕಿಟಕಿಯಿಂದ ಜಿಗಿಯಲು ಯತ್ನಿಸಿದಾಗ ಕಬ್ಬಿಣದ ಚೂಪಾದ ಸರಳು ನಾಟಿದ್ದರಿಂದ ಬಾಲಕ ಮೃತಪಟ್ಟಿರುವುದಾಗಿ~ ಸಿಐಎಸ್‌ಎಫ್ ತಿಳಿಸಿದೆ.

`ಚೂಪಾದ ಸರಳು ಹೊಂದಿದ್ದ ಕಿಟಕಿಯಿಂದ ಬಾಲಕ ಜಿಗಿಯಲು ಹೇಗೆ ಸಾಧ್ಯ ಎಂದಿರುವ ಪೊಲೀಸರು ಈ ವೇಳೆ ಸೇವೆಗೆ ನಿಯೋಜಿತನಾಗಿದ್ದ ಸಿಐಎಸ್‌ಎಫ್ ಜವಾನನ ಹೆಸರು ಹೇಳಲು ಸಿಐಎಸ್‌ಎಫ್ ಹಿಂದೇಟು ಹಾಕುತ್ತಿದೆ~ ಎಂದಿದ್ದಾರೆ.

`ಹುಡುಗನ ಶರೀರದ ಮೇಲೆ ಗಂಭೀರ ಗಾಯಗಳಾಗಿರುವುದು ಕಂಡು ಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ~ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.