ADVERTISEMENT

1,472 ಐಎಎಸ್‌, 864 ಐಪಿಎಸ್‌ ಹುದ್ದೆಗಳು ಖಾಲಿ: ಜಿತೇಂದರ್ ಸಿಂಗ್‌

ಪಿಟಿಐ
Published 4 ಆಗಸ್ಟ್ 2022, 11:04 IST
Last Updated 4 ಆಗಸ್ಟ್ 2022, 11:04 IST
ಜಿತೇಂದ್ರ ಸಿಂಗ್‌
ಜಿತೇಂದ್ರ ಸಿಂಗ್‌   

ನವದೆಹಲಿ: ‘ಈ ವರ್ಷದ ಜನವರಿ 1ರ ಮಾಹಿತಿ ಪ್ರಕಾರ ವಿವಿಧ ರಾಜ್ಯಗಳಲ್ಲಿ1,472 ಐಎಎಸ್‌ ಹಾಗೂ864 ಐಪಿಎಸ್‌ ಹುದ್ದೆಗಳು ಖಾಲಿ ಇವೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಗುರುವಾರ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

‘ಬಸ್ವಾನ್‌ ಸಮಿತಿಯ ಶಿಫಾರಸಿನಂತೆ ಪ್ರತಿ ವರ್ಷವೂ ನಾಗರಿಕ ಸೇವಾ ಪರೀಕ್ಷೆಯ ಮೂಲಕ 180 ಮಂದಿಯನ್ನು ಐಎಎಸ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 2012ರಿಂದಲೂ ಈ ಪ್ರಕ್ರಿಯೆ ನಡೆದುಕೊಂಡು ಬಂದಿದೆ’ ಎಂದು ಹೇಳಿದ್ದಾರೆ.

‘ವರ್ಷವೊಂದರಲ್ಲಿ 180ಕ್ಕೂ ಅಧಿಕ ಮಂದಿಯನ್ನು ಈ ಹುದ್ದೆಗೆ ನೇಮಿಸಿಕೊಳ್ಳುವುದು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಂತೆ. ಅದು ಮಸ್ಸೂರಿಯಲ್ಲಿರುವ ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯ (ಎಲ್‌ಬಿಎಸ್‌ಎನ್‌ಎಎ) ಸಾಮರ್ಥ್ಯವನ್ನೂ ಮೀರಿದಂತಾಗುತ್ತದೆ.ಇದರಿಂದ ಅಭ್ಯರ್ಥಿಗಳ ತರಬೇತಿಗೂ ತೊಡಕಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಹುದ್ದೆಗಳ ಭರ್ತಿಯು ನಿರಂತರವಾದ ಪ್ರಕ್ರಿಯೆ. ನಾಗರಿಕ ಸೇವಾ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುವ ಐಪಿಎಸ್‌ ಹುದ್ದೆಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲಾಗಿದೆ. 2020ರಿಂದಲೇ ಇದು ಜಾರಿಯಾಗಿದೆ. ಅನುಭವದ ಆಧಾರದಲ್ಲಿ ಅಧಿಕಾರಿಗಳಿಗೆ ಪದೋನ್ನತಿ ನೀಡುವ ಬಗ್ಗೆ ಯುಪಿಎಸ್‌ಸಿ ಆಯ್ಕೆ ಸಮಿತಿಯು ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಿ ಚರ್ಚಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.