ADVERTISEMENT

ಅಕ್ರಮ ವಾಸ: ದ್ವಾರಕಾದಿಂದ 16 ವಿದೇಶಿ ಪ್ರಜೆಗಳ ಗಡೀಪಾರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 14:18 IST
Last Updated 10 ಫೆಬ್ರುವರಿ 2025, 14:18 IST
   

​​

ನವದೆಹಲಿ: ವೀಸಾ ಅವಧಿ ಮುಗಿದ ಬಳಿಕವೂ ದೆಹಲಿಯ ದ್ವಾರಕಾದಲ್ಲಿ ಅಕ್ರಮ ವಾಸ ಆರೋಪದ ಮೇಲೆ 16 ವಿದೇಶಿ ಪ್ರಜೆಗಳನ್ನು ಪೊಲೀಸರು ಗಡೀಪಾರು ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಬಾಂಗ್ಲಾದೇಶದ ಐವರು, ನೈಜೀರಿಯಾದ 9, ಗಿನಿಯಾದ ಮತ್ತು ಉಜ್ಬೇಕಿಸ್ತಾನದ ತಲಾ ಒಬ್ಬರನ್ನು ಗಡೀಪಾರು ಮಾಡಲಾಗಿದೆ. ಇದಕ್ಕೂ ಮೊದಲು ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು.

ADVERTISEMENT

ಗಡೀಪಾರುಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದು ಬಾಂಗ್ಲಾದೇಶಿ ಕುಟುಂಬವೂ ಸೇರಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.