ADVERTISEMENT

ಗುವಾಹಟಿ: ಸಿಡಿಲಿಗೆ 18 ಆನೆ ಸಾವು

ಪಿಟಿಐ
Published 13 ಮೇ 2021, 19:55 IST
Last Updated 13 ಮೇ 2021, 19:55 IST

ಗುವಾಹಟಿ: ಅಸ್ಸಾಂನ ನಾಗಾನ್ ಜಿಲ್ಲೆಯ ಅರಣ್ಯದಲ್ಲಿ ಸಿಡಿಲು ಬಡಿದು ಹದಿನೆಂಟು ಆನೆಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿ ಗುರುವಾರ ತಿಳಿಸಿದ್ದಾರೆ.

‘ಕಥಿಯಾಟೋಲಿ ವಲಯದಲ್ಲಿ ಈ ಘಟನೆ ನಡೆದಿದ್ದು, ಸಿಡಿಲು ಬಡಿದು ಆನೆಗಳು ಮೃತಪಟ್ಟಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಮರಣೋತ್ತರ ಪರೀಕ್ಷೆಯ ನಂತರವೇ ನಿಖರವಾದ ಕಾರಣ ತಿಳಿಯಲಿದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಮಿತ್ ಸಹಾಯ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT