ADVERTISEMENT

ಕೇರಳ: ಹೈಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ 18 ಅಲ್ಪಸಂಖ್ಯಾತ ಮಂದಿ ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 8:29 IST
Last Updated 22 ಅಕ್ಟೋಬರ್ 2020, 8:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ (ಕೆಎಸ್‌ಎಲ್‌ಎಂಎ) ನಡೆಸುವ ಹೈಯರ್ ಸೆಕೆಂಡರಿ ಪರೀಕ್ಷೆ(12ನೇ ತರಗತಿ)ಯಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ 18 ಮಂದಿ ಉತ್ತೀರ್ಣರಾಗಿದ್ದಾರೆ.

ಇದು ಪ್ರಾಧಿಕಾರ ನಡೆಸುತ್ತಿರುವ ಹೈಯರ್ ಸೆಕಂಡರಿ ಪರೀಕ್ಷೆಯನ್ನು ಪಾಸು ಮಾಡಿದ ಮೊದಲ ತಂಡವಾಗಿದೆ.

'ಲೈಂಗಿಕ ಅಲ್ಪಸಂಖ್ಯಾತ ನೀತಿ' ಜಾರಿಗೆ ತಂದ ಮೊದಲ ರಾಜ್ಯ ಕೇರಳ. ಈ ನೀತಿಯಡಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ 2018 ರಲ್ಲಿ ಕೆಎಸ್‌ಎಲ್‌ಎಂಎ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಜಂಟಿಯಾಗಿ 'ಸಮನ್ವಯ' ಎಂಬ ಕಾರ್ಯಕ್ರಮವನ್ನು ಪರಿಚಯಿಸಿತ್ತು.

ADVERTISEMENT

ಪರೀಕ್ಷೆಗೆ ಒಟ್ಟು 22 ಜನರು ಹಾಜರಾಗಿದ್ದು, ಪತ್ತನಂತಿಟ್ಟ, ತಿರುವನಂತಪುರ ಮತ್ತು ಕೊಲ್ಲಂ ಸೇರಿದಂತೆ ವಿವಿಧ ಜಿಲ್ಲೆಗಳ 18 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕೆಎಸ್‌ಎಲ್‌ಎಂಎ ಪ್ರಕಟಣೆ ತಿಳಿಸಿದೆ.

ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಆಟೊ ಚಾಲಕ ಕಾರ್ತಿಕ್ ಕೇರಳ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಗೆ ಪ್ರವೇಶ ಪಡೆದಿದ್ದಾರೆ ಎಂದು ಕೆಎಸ್‌ಎಲ್‌ಎಂಎ ಮೂಲಗಳು ತಿಳಿಸಿವೆ.

ಕೆಎಸ್‌ಎಲ್‌ಎಂಎ ನಡೆಸುವ ಹತ್ತನೇ ತರಗತಿ ಪರೀಕ್ಷೆಯ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟು 39 ಲೈಂಗಿಕ ಅಲ್ಪಸಂಖ್ಯಾತರು ಪಾಸಾಗಿದ್ದಾರೆ. ಸದ್ಯ ಮೂವತ್ತು ಮಂದಿ ಪರೀಕ್ಷೆ ಬರೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.