ADVERTISEMENT

ಗಂಗಾ ನದಿ ಮಾಲಿನ್ಯ: 190 ಕೈಗಾರಿಕೆಗಳಿಗೆ ಬೀಗ

ಪಿಟಿಐ
Published 21 ಮಾರ್ಚ್ 2022, 13:57 IST
Last Updated 21 ಮಾರ್ಚ್ 2022, 13:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐದು ರಾಜ್ಯಗಳ 1,080 ಕೈಗಾರಿಕೆಗಳು ಗಂಗಾ ನದಿಯ ಮಾಲಿನ್ಯಕ್ಕೆ ಕಾರಣವಾಗಿವೆ. ಇದರಲ್ಲಿ 190 ಅನ್ನು ಮುಚ್ಚಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಲಶಕ್ತಿ ರಾಜ್ಯ ಖಾತೆ ಸಚಿವ ಬಿಶ್ವೇಶ್ವರ್‌ ಅವರು, ಮಾನದಂಡ ಅನುಸರಿಸದ 165 ಕಾರ್ಖಾನೆಗಳ ಪೈಕಿ ಒಂಬತ್ತು ಅನ್ನು ಮುಚ್ಚಲು ಆದೇಶಿಸಲಾಗಿದೆ. 156 ಕೈಗಾರಿಕೆಗಳಿಗೆ ಷೋಕಸ್‌ ನೋಟಿಸ್‌ ನೀಡಲಾಗಿದೆ. ದಿನನಿತ್ಯ 28.017 ಕೋಟಿ ಲೀಟರ್‌ ಕಲುಷಿತ ನೀರು ಹಾಗೂ 9.68 ಟನ್‌ಜೀವ ರಾಸಾಯನಿಕತ್ಯಾಜ್ಯ ಗಂಗೆಯ ಒಡಲನ್ನುಸೇರುತ್ತಿದೆ ಎಂದರು.

2020–21ನೇ ಸಾಲಿನಲ್ಲಿ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ್‌, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳದ 1,080 ಕೈಗಾರಿಕೆಗಳ ತ್ಯಾಜ್ಯದ ನೀರು ನದಿಯ ಮುಖ್ಯ ಭಾಗಕ್ಕೆ ಸೇರುತ್ತಿದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.