ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ ವೇಳೆ ನಡೆದಿದ್ದ ಜೋಡಿ ಕೊಲೆ ಕೃತ್ಯದ ಸಂಬಂಧ ಮಾಜಿ ಸಂಸದ, ಕಾಂಗ್ರೆಸ್‌ನ ಸಜ್ಜನ್ ಕುಮಾರ್ ಅವರ ವಿರುದ್ಧದ ಪ್ರಕರಣ ಸಂಬಂಧ ತೀರ್ಪು ಹೊರಡಿಸುವುದನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ.
ವಿಶೇಷ ನ್ಯಾಯಾಧೀಶರಾದ ಕಾವೇರಿ ಭವೇಜಾ ಅವರು, ಪೂರ್ವನಿಗದಿಯಂತೆ ಮಂಗಳವಾರ ತೀರ್ಪು ನೀಡಬೇಕಾಗಿತ್ತು. ಇನ್ನಷ್ಟು ವಾದಮಂಡನೆ ಅಗತ್ಯವಿದೆ ಎಂಬ ವಕೀಲರ ಕೋರಿಕೆಯ ಕಾರಣದಿಂದಾಗಿ ಆದೇಶ ಹೊರಡಿಸುವುದನ್ನು ಜನವರಿ 31ಕ್ಕೆ ಮುಂದೂಡಿದರು.
ಸಿಖ್ ವಿರೋಧಿ ಗಲಭೆ ಅವಧಿಯಲ್ಲಿ ಸರಸ್ವತಿ ವಿಹಾರ್ ಬಡಾವಣೆಯಲ್ಲಿ ನಡೆದಿದ್ದ ಇಬ್ಬರ ಕೊಲೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಜ್ಜನ್ ಕುಮಾರ್ ಅವರು ಸದ್ಯ ತಿಹಾರ್ ಜೈಲಿನಲ್ಲಿ ಇದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ನವೆಂಬರ್ 1, 1984ರಲ್ಲಿ ನಡೆದಿದ್ದ ಘಟನೆಯಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್‌ದೀಪ್ ಸಿಂಗ್ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.