ADVERTISEMENT

1993ರ ರೈಲು ಸ್ಫೋಟ ಆರೋಪಿ ವಿರುದ್ಧ 3 ತಿಂಗಳಲ್ಲಿ ಆರೋಪ ದಾಖಲಿಸಲು ಸೂಚನೆ

ರೈಲುಗಳಲ್ಲಿನ ಸರಣಿ ಸ್ಫೋಟ ಪ್ರಕರಣ

ಪಿಟಿಐ
Published 27 ಸೆಪ್ಟೆಂಬರ್ 2021, 18:18 IST
Last Updated 27 ಸೆಪ್ಟೆಂಬರ್ 2021, 18:18 IST

ನವದೆಹಲಿ: ರಾಜಧಾನಿ ಎಕ್ಸ್‌ಪ್ರೆಸ್‌ ಮತ್ತು ಇತರ ರೈಲುಗಳಲ್ಲಿ 1993ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಯ ವಿರುದ್ಧ ಮೂರು ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ರಾಜಸ್ಥಾನದ ಅಜ್ಮೀರ್‌ನ ವಿಶೇಷ ಟಾಡಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010 ರಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದ ಹಮೀರ್ ಉಯಿ ಉದ್ದೀನ್ ಅವರ ಜಾಮೀನು ಅರ್ಜಿ ಯನ್ನು ಸುಪ್ರೀಂ ಕೋರ್ಟ್ ಬಾಕಿ ಉಳಿಸಿ ಕೊಂಡಿತು. ಆತನ ವಿರುದ್ಧದ ಆರೋಪ ಗಳನ್ನು ದಾಖಲಿಸಿದ ನಂತರ ಅದನ್ನು ಪರಿಗಣಿಸಲಾಗುವುದು ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT