ADVERTISEMENT

2ಜಿ ಹಗರಣ: ಕೋರ್ಟ್‌ಗೆ ಗೈರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ನವದೆಹಲಿ (ಪಿಟಿಐ): ಎಸ್ಸಾರ್ ಸಮೂಹ ಹಾಗೂ ಲೂಪ್ ಟೆಲಿಕಾಂ ಪ್ರವರ್ತಕರಾದ ಅಂಶುಮಾನ್, ರವಿ ರುಯಾ ಮತ್ತು ಐ.ಪಿ.ಖೈತಾನ್,  ಕಿರಣ್ ಖೈತಾನ್ ಅವರು, 2ಜಿ ತರಂಗಾಂತರ ಹಂಚಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ಗೆ ಶುಕ್ರವಾರ ಗೈರು ಹಾಜರಿದ್ದರು.

ಇವರಿಗೆಲ್ಲ ಸಮನ್ಸ್ ಜಾರಿ ಮಾಡಿಲ್ಲ ಎಂದು ಅವರ ವಕೀಲರು ಕೋರ್ಟ್‌ಗೆ ತಿಳಿಸಿದರು. `ನನ್ನ ಕಕ್ಷಿದಾರನ ನಿವಾಸಕ್ಕೆ ಸಮನ್ಸ್ ಕಳುಹಿಸಿಲ್ಲ. ಅದೂ ಅಲ್ಲದೆ ಅವರು ವಿದೇಶದಲ್ಲಿ ಇರುವುದರಿಂದ ನ್ಯಾಯಾಲಯದ ಮುಂದೆ ಹಾಜರಾಗಲು ಒಂದು ತಿಂಗಳು ವಿನಾಯಿತಿ ಕೇಳುತ್ತಿದ್ದಾರೆ~ ಎಂದು ಎಸ್ಸಾರ್ ಸಮೂಹದ ನಿರ್ದೇಶಕ ವಿಕಾಸ್ ಸರಾಫ್ ಪರ ವಕೀಲ ಸಿದ್ಧಾರ್ಥ ಲೂಥ್ರಾ, ಸಿಬಿಐ ವಿಶೇಷ ನ್ಯಾಯಾಧೀಶರಾದ ಒ.ಪಿ.ಸೈನಿ ಅವರಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಪ್ರವರ್ತಕರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಲಾಯಿತು. ಈ ಮೊದಲು ಡಿಸೆಂಬರ್ 21ರಂದು ಸಿಬಿಐ ವಿಶೇಷ ನ್ಯಾಯಾಧೀಶರು ಅಂಶುಮಾನ್, ರವಿ ರುಯಾ, ಐ.ಪಿ.ಖೈತಾನ್, ಕಿರಣ್ ಖೈತಾನ್, ವಿಕಾಸ್ ಸರಾಫ್ ಮತ್ತು ಮೂರು ಸಂಸ್ಥೆಗಳಿಗೆ ಸಮನ್ಸ್ ಜಾರಿಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.