ADVERTISEMENT

2ನೇ ಅಣು ಪರೀಕ್ಷೆ ‘ಆಪರೇಷನ್ ಶಕ್ತಿ’ಗೆ 20 ವರ್ಷ

​ಪ್ರಜಾವಾಣಿ ವಾರ್ತೆ
Published 11 ಮೇ 2018, 19:30 IST
Last Updated 11 ಮೇ 2018, 19:30 IST
ಅಣ್ವಸ್ತ್ರ ಪರೀಕ್ಷೆಗಳ ನಂತರ ಉಂಟಾಗಿದ್ದ ಕುಳಿ (ಮೊದಲ ಚಿತ್ರ). ಪರೀಕ್ಷೆಗೆ ಅಣ್ವಸ್ತ್ರವನ್ನು ಅಣಿಗೊಳಿಸುತ್ತಿರುವುದು (ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಟ್ವಿಟರ್ ಖಾತೆಯೆಂದ ತೆಗೆದುಕೊಂಡ ಚಿತ್ರಗಳು)
ಅಣ್ವಸ್ತ್ರ ಪರೀಕ್ಷೆಗಳ ನಂತರ ಉಂಟಾಗಿದ್ದ ಕುಳಿ (ಮೊದಲ ಚಿತ್ರ). ಪರೀಕ್ಷೆಗೆ ಅಣ್ವಸ್ತ್ರವನ್ನು ಅಣಿಗೊಳಿಸುತ್ತಿರುವುದು (ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಟ್ವಿಟರ್ ಖಾತೆಯೆಂದ ತೆಗೆದುಕೊಂಡ ಚಿತ್ರಗಳು)   

ದೇಶದ ಎರಡೆನೇ ಅಣು ಪರೀಕ್ಷೆ ಪೋಖ್ರಾಣ್–2 ಅಥವಾ ಆಪರೇಷನ್ ಶಕ್ತಿ ನಡೆದು ಶುಕ್ರವಾರಕ್ಕೆ (ಮೇ 11) 20 ವರ್ಷ ತುಂಬಿದೆ. ಮೇ 11,13 ರಂದು ನಡೆದ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿದ್ದವು.

ಭಾರತದ ಮಿಸೈಲ್‌ಮ್ಯಾನ್ ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಆಪರೇಷನ್ ಶಕ್ತಿ ನಡೆದಿತ್ತು. ಈ ಪರೀಕ್ಷೆಯ ಸ್ಮರಣಾರ್ಥ ಮೇ 11 ಅನ್ನು ಭಾರತದ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.

* ಅಣು ಪರೀಕ್ಷೆ ನಡೆಸಿದ ಕಾರಣಕ್ಕೆ ಅಮೆರಿಕವು ಭಾರತದ ಮೇಲೆ ನಿರ್ಬಂಧ ಹೇರಿತ್ತು.

ADVERTISEMENT

* ಎರಡನೇ ಹಂತದ ಪರೀಕ್ಷೆಯ ವಿವರ ಬಹಿರಂಗವಾಗುತ್ತಿದ್ದಂತೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿತ್ತು.

* ವಿಜ್ಞಾನಿಗಳು ಸೈನಿಕರ ಸಮವಸ್ತ್ರದಲ್ಲಿ ಕಾರ್ಯನಿರ್ವಹಿಸಿದ್ದ ಕಾರಣ ಮತ್ತು ಬಹುತೇಕ ಕಾರ್ಯಾಚರಣೆ ರಾತ್ರಿ ವೇಳೆ ನಡೆದಿದ್ದರಿಂದ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎನ ಉಪಗ್ರಹಗಳ ಕಣ್ತಪ್ಪಿಸಲು ಭಾರತಕ್ಕೆ ಸಾಧ್ಯವಾಗಿತ್ತು. ಈ ಪರೀಕ್ಷೆಯನ್ನು ಪತ್ತೆ ಮಾಡುವಲ್ಲಿ ತಾನು ವಿಫಲವಾಗಿದ್ದಾಗಿ ಸಿಐಎ ಹೇಳಿಕೆ ನೀಡಿತ್ತು.

ಸ್ಮೈಲಿಂಗ್ ಬುದ್ಧ
ಇದು ಭಾರತದ ಮೊದಲ (1974) ಅಣು ಪರೀಕ್ಷೆ ಕಾರ್ಯಾಚರಣೆಗೆ ಇರಿಸಿದ್ದ ಹೆಸರು. ರಾಜಸ್ಥಾನದ ಪೋಖ್ರಾಣ್‌ನಲ್ಲಿ ನಡೆದಿದ್ದರಿಂದ ಇದನ್ನು ಪೋಖ್ರಾಣ್–1 ಎಂದೂ ಕರೆಯಲಾಗುತ್ತದೆ.

*
ಈ ಪರೀಕ್ಷೆ ಅಂದಿನ ಸರ್ಕಾರ ದೃಢ ನಿರ್ಧಾರವಾಗಿತ್ತು. ಇದು ಭಾರತದ ರಾಜಕೀಯ ಇಚ್ಛಾಶಕ್ತಿ ಮತ್ತು ವೈಜ್ಞಾನಿಕ ಸಾಮರ್ಥ್ಯವನ್ನು ಜಗತ್ತಿನ ಎದುರು ತೆರೆದಿಟ್ಟಿತ್ತು.
-ರಾಮನಾಥ ಕೋವಿಂದ್, ರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.