
ಪ್ರಜಾವಾಣಿ ವಾರ್ತೆಪಣಜಿ (ಪಿಟಿಐ/ಐಎಎನ್‌ಎಸ್): ಗೋವಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು 2ನೇ ದಿನವಾದ ಶನಿವಾರವೂ ಗೈರು ಹಾಜರಾಗಿದ್ದಾರೆ.
ಪಕ್ಷದ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ನರೇಂದ್ರ ಮೋದಿ ಅವರನ್ನು ನೇಮಿಸಲಾಗುತ್ತದೆ ಎಂದೇ ಹೇಳಲಾಗುತ್ತಿರುವ ಈ ಸಭೆಯಿಂದ ಅಡ್ವಾಣಿ ದೂರ ಉಳಿದಿರುವುದು ಪಕ್ಷದ ಇತಿಹಾಸದಲ್ಲಿ ಇದೇ ಮೊದಲಾಗಿದೆ.
ಅನಾರೋಗ್ಯದ ಕಾರಣಗಳಿಂದಾಗಿಯೇ ಅಡ್ವಾಣಿ ಅವರು ಬಂದಿಲ್ಲ ಎಂದು ಶನಿವಾರವೂ ಬಿಜೆಪಿ ಪಕ್ಷ ಸಮಜಾಯಿಷಿ ನೀಡಿದೆ.
ಆದರೆ ಅಡ್ವಾಣಿ ಅವರು ಇರಲಿ ಇಲ್ಲದಿರಲಿ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವುದು ಬಹುತೇಕ ಖಚಿತ ಎಂದೇ ಪಕ್ಷದ ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಸುಷ್ಮಾ ಸ್ವರಾಜ್ ಅವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.