ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಹೊಶೈಪುರ, (ಪಂಜಾಬ್): ವಿಚಾರಣಾಧೀನ ಕೈದಿಗಳಿಬ್ಬರು ಜೈಲಿನ ಶೌಚಾಲಯದೊಳಗೆ ಒಟ್ಟಿಗೆ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಹೋಶಿಯಾರ್‌ಪುರ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಉತ್ತರ ಪ್ರದೇಶದ ಟಿಟು (22) ಹಾಗೂ ಪಂಜಾಬ್‌ನ ಹೋಶಿಯಾರ್‌ಪುರ ಓಂಕಾರ್ ಚಾಂದ್ (42) ಎಂದು ಗುರುತಿಸಲಾಗಿದೆ.
ಟಿಟು ಫೊಕ್ಸೊ ಪ್ರಕರಣದಡಿ, ಓಂಕಾರ್ ಡ್ರಗ್ಸ್ ಪ್ರಕರಣದಡಿ ವಿಚಾರಣೆ ಎದುರಿಸುತ್ತಿದ್ದರು.
ಒಟ್ಟಿಗೆ ಏಕೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.