ADVERTISEMENT

ಪೊಲೀಸ್‌ ಅಧಿಕಾರಿ ಹತ್ಯೆಯಲ್ಲಿ ಜಿಇಎಂ ಉಗ್ರರು ಸೇರಿದಂತೆ ವಿದೇಶಿ ವ್ಯಕ್ತಿ ಭಾಗಿ

ಪಿಟಿಐ
Published 28 ಜೂನ್ 2021, 9:37 IST
Last Updated 28 ಜೂನ್ 2021, 9:37 IST
ಉಗ್ರರ ದಾಳಿಯಲ್ಲಿ ಸಾವಿಗೀಡಾದ ಪೊಲೀಸ್‌ ವಿಶೇಷ ಅಧಿಕಾರಿ ಫಯಾದ್‌ ಅಹಮದ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಗ್ರಾಮಸ್ಥರು                          –‍ಪಿಟಿಐ ಚಿತ್ರ
ಉಗ್ರರ ದಾಳಿಯಲ್ಲಿ ಸಾವಿಗೀಡಾದ ಪೊಲೀಸ್‌ ವಿಶೇಷ ಅಧಿಕಾರಿ ಫಯಾದ್‌ ಅಹಮದ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಗ್ರಾಮಸ್ಥರು                          –‍ಪಿಟಿಐ ಚಿತ್ರ   

ಶ್ರೀನಗರ: ‘ಪೊಲೀಸ್‌ ವಿಶೇಷಾಧಿಕಾರಿ(ಎಸ್‌ಪಿಒ) ಮತ್ತು ಅವರ ಕುಟುಂಬದವರ ಹತ್ಯೆಯಲ್ಲಿ ವಿದೇಶಿಗ ಸೇರಿದಂತೆ ಇಬ್ಬರು ಜೈಷ್‌–ಎ–ಮೊಹಮ್ಮದ್ (ಜೆಇಎಂ) ಉಗ್ರರು ಭಾಗಿಯಾಗಿದ್ದಾರೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.

‘ಎಸ್‌ಪಿಒ ಫಯಾಜ್‌ ಅಹಮದ್‌ ಮೇಲೆ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದಾರೆ. ಅವರನ್ನು ರಕ್ಷಿಸಲು ಹೋದ ಪತ್ನಿ ಮತ್ತು ಮಗಳ ಮೇಲೂ ಉಗ್ರರು ಗುಂಡು ಹಾರಿಸಿದ್ದಾರೆ. ಈ ಪ್ರದೇಶದಲ್ಲಿ ಉಗ್ರರು ಸಕ್ರಿಯರಾಗಿದ್ದಾರೆ. ಭಾನುವಾರ ರಾತ್ರಿ ಇಬ್ಬರು ಉಗ್ರರು ಇಲ್ಲಿಗೆ ಬಂದಿದ್ದರು. ಅದರಲ್ಲಿ ಒಬ್ಬ ವಿದೇಶಿ ಉಗ್ರನಾಗಿದ್ದಾನೆ’ ಎಂದು ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್‌ ಹೇಳಿದರು.

ವಿಜಯ್‌ ಕುಮಾರ್‌ ಅವರು ಎಸ್‌ಪಿಒ ಕುಟುಂಬದವರನ್ನು ಭೇಟಿಯಾಗಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ADVERTISEMENT

‘ಫಯಾಜ್‌ ಅಹಮದ್‌ ಮತ್ತು ಅವರ ಪತ್ನಿ, ಮಗಳ ಸಾವು ನಮಗೆ ಬಹಳ ನೋವನ್ನು ನೀಡಿದೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಆದಷ್ಟು ಬೇಗ ಬಂಧಿಸುತ್ತೇವೆ. ಈ ಪ್ರದೇಶದಲ್ಲಿ ಜೆಇಎಂ ಸಕ್ರಿಯವಾಗಿದೆ. ಈ ಸಂಘಟನೆಯೇ ದಾಳಿ ನಡೆಸಿರಬೇಕು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.